HEALTH TIPS

ಸಾರ್ವಜನಿಕರ ಮತದಾನ ಸುಲಭಕ್ಕೆ ಡೆಮೋ ಹಟ್ ಇಂದಿನಿಂದ ಆರಂಭ

ಕಾಸರಗೋಡು: ಸಾರ್ವಜನಿಕರಿಗೆ ಮತದಾನ ಸುಲಭಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆವರಣದಲ್ಲಿ ಡೆಮೋ ಹಟ್ (ಮತದಾನ ತರಬೇತಿ ಕೇಂದ್ರ) ಸ್ಥಾಪಿಸಲಾಗಿದ್ದು, ಇಂದು ಚಟುವಟಿಕೆ ಆರಂಭಿಸಲಿದೆ. ಬೆಳಿಗ್ಗೆ 11.30ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಡೆಮೋ ಹಟ್ ಉದ್ಘಾಟಿಸುವರು. ಚುನಾವಣೆ ಆಯೋಗ ನೂತನವಾಗಿ ರಚಿಸಿರುವ ವಿವಿಪಾಟ್ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ನ್ನು ಸಾರ್ವಜನಿಕರಿಗೆ ಪರಿಚಯಪಡಿಸಿ, ಚುನಾವಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಸಿವಿಲ್ ಸ್ಟೇಷನ್ ಗೆ ಆಗಮಿಸುವ ಮಂದಿಈ ಸೇವೆಯನ್ನು ಬಳಸಿಕೊಳ್ಳಬಹುದು. ಸಾರ್ವಜನಿಕರಿಗೆ, ಅದರಲ್ಲೂ ಪ್ರಥಮ ಬಾರಿಗೆ ಮತದಾನನಡೆಸುತ್ತಿರುವವರಿಗೆ ತರಬೇತಿ ಮತ್ತು ಸಂಶಯಗಳ ನಿವಾರಣೆ ನಡೆಸುವ ನಿಟ್ಟಿನಲ್ಲಿ ಈ ಡೆಮೋಹಟ್ ಪೂರಕವಾಗಿದೆ. ಚುನಾವಣೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 968 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಕಡೆಗಳಲ್ಲೂ ವಿವಿಪಾಟ್(ವೋಟರ್ ವೆರಿಫಯಬಲ್ ಪೇಪರ್ ಆಡಿಟ್ ಟ್ರಯಲ್) ಮೆಷಿನ್ ಬಳಸಲಾಗುತ್ತಿದೆ. ಈ ಕಾರಣದಿಂದ ವಿವಿಪಾಟ್ ಮೆಷಿನ್ ಜನತೆಗೆ ಪರಿಚಯಮಾಡಿಕೊಡಬೇಕಾದುದು ಅನಿವಾರ್ಯವಾಗಿದೆ. ಮತದಾನ ಸುಲಭಗೊಳಿಸಲು ಇದು ಪೂರಕವಾಗಿದೆ. ವಿವಿಪಾಟ್ ಮೆಷಿನ್ ಮೂಲಕ ತಾವು ಬಯಸಿದ ಅಭ್ಯರ್ಥಿಗೇ ತನ್ನ ಮತ ಲಭಿಸಿದೆಯೇ ಎಂದು ಖಚಿತಪಡಿಸಿಕೊಳ್ಳುವ ಅವಕಾಶವೂ ಇದೆ. ಕಳೆದ ಬಾರಿಯಲೋಕಸಭೆ ಚುನಾವಣೆಯಲ್ಲಿ ವಿವಿಪಾಟ್ ಮೆಷಿನ್ ಪ್ರಥಮಬಾರಿಗೆ ಬಳಸಲಾಗಿತ್ತು. ಮತದಾತ ಮತಚಲಾಯಿಸಿದ ತಕ್ಷಣ ಬಳಿಯಲ್ಲೇ ಇರುವ ವಿವಿಪಾಟ್ ಮೆಷಿನ್ ನಲ್ಲಿ ಯಾವ ಅಭ್ಯರ್ಥಿಗೆ ತನ್ನ ಮತ ಲಭಿಸಿದೆ, ಅವರ ಹೆಸರು, ಸೀರಿಯಲ್ ನಂಬ್ರ, ಚಿಹ್ನೆ ಇತ್ಯಾದಿ 8 ಸೆಕೆಂಡ್ ವರೆಗೆ ಮೆಷಿನ್ ನ ಸ್ಕ್ರೀನ್ ನಲ್ಲಿ ಕಾಣಬಹುದಾಗಿದೆ. 8 ಸೆಕೆಂಡ್ ಕಳೆದ ಮೇಲೆ ಅದರ ಸ್ಲಿಪ್ ಮೆಷನ್ ನೊಂದಿಗೆ ಅಳವಡಗೊಂಡಿರುವ ಬಾಕ್ಸ್ ನಲ್ಲಿ ಬೀಳಲಿದೆ. ಹೀಗೆ ಪ್ರತಿ ಪ್ರತಿ ಮತದಾರನ ಸ್ಲಿಪ್ ಗಳು ವಿವಿಪಾಟ್ ಮೆಷಿನ್ ಬಾಕ್ಸ್ ನಲ್ಲಿ ಸಂಗ್ರಹಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries