ಮಾ.28ರಿಂದ ಕುಂಟಾರು ಶ್ರೀಕ್ಷೇತ್ರದ ಜಾತ್ರೋತ್ಸವ
0
ಮಾರ್ಚ್ 20, 2019
ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಮಾರ್ಚ್ 28, 29 ಮತ್ತು 30 ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾರ್ಚ್ 28ರಂದು ರಾತ್ರಿ ಅತ್ತಾಳ, 7ಕ್ಕೆ ಪುತ್ತೂರು ಜಗದೀಶ್ ಆಚಾರ್ಯ ಅವರ ಕಲಾ ಸಿಂಧೂ ಬಳಗದವರಿಂದ ಸಂಗೀತ ಗಾನ ವೈಭವ, 9.30ರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇದರ ಮಕ್ಕಳಿಂದ ಯಕ್ಷಗಾನ ಬಯಲಾಟ, ಮಾರ್ಚ್ 29ರಂದು ಬೆಳಿಗ್ಗೆ 9ಕ್ಕೆ ಗಣಪತಿಹೋಮ, 9.30ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 3ಕ್ಕೆ ಮುಖ್ಯಪ್ರಾಣ ಭಜನಾ ಸಂಘ ಆದೂರು ಗ್ರಾಮ ಇವರಿಂದ ಭಜನಾಮೃತ, ಸಂಜೆ 5ಕ್ಕೆ ಹರಿಪ್ರಿಯ ಮಹಿಳಾ ಭಜನಾ ಸಂಘ ಮುಳ್ಳೇರಿಯ ಇವರಿಂದ ಭಜನೆ, ಸಂಜೆ 7ರಿಂದ ವಿಧುಷಿ ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ, ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನದಾನ, 8.30ಕ್ಕೆ ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಮಾರ್ಚ್ 30ರಂದು ಬೆಳಿಗ್ಗೆ 6ರಿಂದ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, 9ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 6.30ರಿಂದ ಕುಂಟಾರು ಶ್ರೀ ಶಾರದಾ ಸಂಗೀತ ಕಲಾ ಶಾಲೆ ಇದರ ದಾಮೋದರ ಮಾಸ್ತರ್ ಮತ್ತು ಶಿಷ್ಯವೃಂದದವರಿಂದ ಭಕ್ತಿ ಸಂಗೀತ, ರಾತ್ರಿ 8.30ಕ್ಕೆ ರಂಗಪೂಜೆ, ಅನ್ನದಾನ, 9ರಿಂದ ಧಾರ್ಮಿಕ ಸಭೆ, ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡುವರು. ಸಹನಾ ಕುಂದರ್ ಕಾರ್ಕಳ ಇವರಿಂದ ಧಾರ್ಮಿಕ ಭಾಷಣ, ಉಣ್ಣಿಕೃಷ್ಣನ್ ಕುಂಟಾರು ಮತ್ತು ವಿಶ್ವನಾಥ ಭಟ್ ಬೇಂದ್ರ್ರೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಚಂದ್ರಿಕಾ ಮಂಜುನಾಥ ಶೆಣೈ ಮುಳ್ಳೇರಿಯ ಮತ್ತು ಝೀ ಕನ್ನಡ ಡ್ರಾಮಾ ಜೂನಿಯರ್ ಖ್ಯಾತಿಯ ಅನೂಪ್ ರಮಣ ಶರ್ಮಾ ಮುಳ್ಳೇರಿಯ ಇವರಿಗೆ ಸನ್ಮಾನ, ಹಿರಿಯರಾದ ಮಹಾಲಿಂಗ ನಾಯ್ಕ ಮಾಯಿಲಂಕೋಟೆ ಮತ್ತು ಕಮಲ ಕುಂಟಾರು ಇವರಿಗೆ ಅಭಿನಂದನೆ, ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ, ಕುಂಟಾರು ಎಯುಪಿ ಶಾಲೆಯ 7ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗೆ ಅಭಿನಂದನೆ ನಡೆಯಲಿದೆ. ರಾತ್ರಿ 10ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇವರಿಂದ ಯಕ್ಷಗಾನ ಬಯಲಾಟ ಮಯೂರೇಕ ವಿಜಯ ನಡೆಯಲಿದೆ.
ಮಾ.31ರಂದು ಬೆಳಿಗ್ಗೆ 9ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ, 11.30ಕ್ಕೆ ಪಡೈ ಚಾಮುಂಡಿ ದೈವದ ನೇಮ, ಸಂಜೆ 4ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ ನಡೆಯಲಿದೆ.

