ಕಂಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಗಡಿಬಳೆ ಪ್ರದಾನ ಕಾರ್ಯಕ್ರಮ
0
ಮಾರ್ಚ್ 20, 2019
ಕುಂಬಳೆ: ಕಂಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸೋಮವಾರ ಜರಗಿದ ವೈದಿಕ ಸಮಾರಂಭದಲ್ಲಿ ಕುಡಾಲುಮೇರ್ಕಳ ಗ್ರಾಮದ ಶ್ರೀ ಜಟಾಧಾರಿ ದೈವದ ಅನುವಂಶಿಕ ಗಡಿಬಳೆ ಗುರಿಕ್ಕಾರರಾಗಿ ಕುಡಾಲು ಭಂಡಾರಗುತ್ತು ದೇಸಿಂಗ ಬಂಟ ಪರಂಪರೆಯ ಯಜಮಾನ ರಾಮಕೃಷ್ಣ ಭಂಡಾರಿಯವರಿಗೆ ಗಡಿಬಳೆ ಪ್ರದಾನ ಮಾಡಲಾಯಿತು.ಹಿಂದಿನ ಗುರಿಕ್ಕಾರರಾಗಿದ್ದ ಯಜಮಾನ ಕಾಂತಪ್ಪ ರೈ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸಂಪ್ರದಾಯದಂತೆ ಭಂಡಾರಗುತ್ತಿನ ನೂತನ ಯಜಮಾನರಾಗಿ ರಾಮಕೃಷ್ಣ ಭಂಡಾರಿ ನಿಯುಕ್ತರಾಗಿದ್ದರು.
ಸಮಾರಂಭದಲ್ಲಿ ಕಂಬಾರು ಕ್ಷೇತ್ರದ ಆಡಳಿತ ಮೋಕ್ತೇಸರ ಬಾಡೂರು ಯಜಮಾನ ಕುಂಞ್ಞಣ್ಣ ಭಂಡಾರಿಯವರು ಪಾರಂಪರಿಕ ಗಡಿಬಳೆಯನ್ನು ರಾಮಕೃಷ್ಣ ಭಂಡಾರಿಯವರಿಗೆ ತೊಡಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಬಾಲಕೃಷ್ಣ ಅಡಿಗರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.ತಂತ್ರಿವರ್ಯ ಬ್ರಹ್ಮಶ್ರೀ ಪ್ರಕಾಶ ಕಡಮಣ್ಣಾಯ, ಕ್ಷೇತ್ರದ ಮೊಕ್ತೇಸರರಾದ ನೆರಿಯ ಲಕ್ಷ್ಮೀನಾರಾಯಣ ಹೆಗ್ಡೆ ಸೇವಾಸಂಘದ ಅಧ್ಯಕ್ಷ ನ್ಯಾಯವಾದಿ ಪ್ರದೀಪ್ ರಾವ್ ಮೇಪೆÇೀಡು ಧಾರ್ಮಿಕ ಪ್ರಮುಖರಾದ ಕೋಳಾರು ಸತೀಶ್ಚಂದ್ರ ಭಂಡಾರಿ,ಭಂಡಾರಗುತ್ತು ಸೀತಾರಾಮ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ,ಕುಂಡೇರಿ ಜನಾರ್ಧನ ನಾಯಕ್ ಮತ್ತು ಕುಡಾಲು ಬಾಡೂರು ಗ್ರಾಮದ ಪ್ರಮುಖರು ಹಾಗೂ ಕುಡಾಲು ಭಂಡಾರಗುತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

