ರಾಜ್ಯ ಮಟ್ಟದಲ್ಲಿ 3ನೇ ರ್ಯಾಂಕ್
0
ಮಾರ್ಚ್ 21, 2019
ಕುಂಬಳೆ: ಕೇರಳ ರಾಜ್ಯ ಮಟ್ಟದಲ್ಲಿ ಶಾಲಾ ಮಕ್ಕಳಿಗಾಗಿ 2018-19ನೇ ಸಾಲಿನಲ್ಲಿ ಕುಟ್ಟಿಪ್ಪುರಂ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ ನಡೆಸಿದ ಟೇಲೆಂಟ್ ಪರೀಕ್ಷೆಯಲ್ಲಿ ಸಾನ್ವಿ ಪಿ.ರೈ ರಾಜ್ಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾಳೆ. ಕುಂಬಳೆ ಶೇಡಿಕಾವು ಶಂಕರಪುರಂ ಶ್ರೀ ಕೃಷ್ಣ ವಿದ್ಯಾಲಯದ ಯುಕೆಜಿ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ, ಕೆ.ಪುಷ್ಪರಾಜ್ ರೈ ಮತ್ತು ಲತಾ ಪಿ.ರೈ ದಂಪತಿಯ ಪುತ್ರಿ.

