ಬಾಯಾರು : ವಾರ್ಷಿಕ ಭೂತಬಲಿ ಉತ್ಸವ
0
ಮಾರ್ಚ್ 21, 2019
ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ಹಾಗು ಮಲರಾಯ ದೈವಂಗಳ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ವಾರ್ಷಿಕ ದೇವರ ಉತ್ಸವ ಹಾಗು ಭೂತಬಲಿ ಬುಧವಾರ ಉತ್ಸವ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನವಕಾಭಿಷೇಕ, ಅಪರಾಹ್ನ ತುಲಾಭಾರ ಸೇವೆ, ಮಹಾಪೂಜೆ ಹಾಗು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ, ಪ್ರಸಾದ ವಿತರಣೆ ಜರಗಿತು. ಮರುದಿನ ಉತ್ಸವ ಬಲಿ, ಬಟ್ಟಲು ಕಾಣಿಕೆ ಕಾರ್ಯಕ್ರಮ ಜರಗಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಉತ್ಸವದ ನಂತರ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ನರಕಾಸುರ ಮೋಕ್ಷ, ಮೈಂದ ದ್ವಿವಿದ ಕಾಳಗ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

