ಚೊಟ್ಟೆ; ಕುಲದೇವರಿಗೆ ಕೊಡೆ ಸಮರ್ಪಣೆ
0
ಮಾರ್ಚ್ 21, 2019
ಮುಳ್ಳೇರಿಯ: ಲಾಡ್ ಮನೆತನದ ಕುಂಡಂಗುಳಿ ಚೊಟ್ಟೆ ಶ್ರೀ ದುರ್ಗಾದೇವಿ ದೇವರ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕುಲದೇವರಿಗೆ ಕೊಡೆ ಸಮರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ದೇವರ ಮನೆ ಆಡಳಿತೆ ಸಮಿತಿ ಅಧ್ಯಕ್ಷ ಹರೀಶ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಕೀರ್ತನ್ ಕುಮಾರ್, ಕುಲಗುರುಗಳಾದ ರಾಮಕೃಷ್ಣ ರಾವ್, ದೇವರ ಮನೆ ಆಡಳಿತೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ರಾಜ್, ಭಾಸ್ಕರ ರಾವ್ ಕಾರ್ಕಳ, ಕೇಶವ ರಾವ್ ಅಂಬುಕುಂಜೆ ಉಪಸ್ಥಿತರಿದ್ದರು. ಏ.23ರಿಂದ ನಡೆಯಲಿರುವ ದೈವದ ಕೋಲ ಮಹೋತ್ಸವದ ಬಗ್ಗೆ ವಿಚಾರ ವಿನಿಮಯ ನಡೆಯಿತು.
ದೇವರ ಮನೆ ಆಡಳಿತೆ ಸಮಿತಿ ಕಾರ್ಯದರ್ಶಿ ಅಶೋಕ್ ರಾವ್ ಸ್ವಾಗತಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ರಾಜ್‍ಕುಮಾರ್ ವಂದಿಸಿದರು.
ದೀಪಾರಾಧನೆ, ಭಜನೆ, ಶಿವ-ಪಾರ್ವತಿ ದೇವರ ಆರಾಟು ಮಹೋತ್ಸವ ಕಾರ್ಯಕ್ರಮಗಳು ಭಾನುವಾರ ರಾತ್ರಿ ನಡೆಯಿತು.

