ಮತದಾನ ಜಾಗೃತಿ: ಸ್ವೀಪ್ ಕ್ರಿಯಾ ಯೋಜನೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು
0
ಮಾರ್ಚ್ 21, 2019
ಕಾಸರಗೋಡು: ಮತದಾನ ಕುರಿತು ಜಾಗೃತಿಯುಂಟು ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಜಾರಿಗೊಳಿಸಿರುವ 2019ರ ಚುನಾವಣೆ ಸಂಬಂಧ ಸ್ವೀಪ್(ಎಸ್.ವಿ.ಇ.ಇ.ಪಿ.) ಕ್ರಿಯಾ ಯೋಜನೆ ಅಂಗವಾಗಿ ವಿವಿಧೆಡೆ ಪ್ರತ್ಯೇಕ ರೀತಿಯ ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲಾ ಚುನಾವಣೆ ವಿಭಾಗ ಕಚೇರಿ ವತಿಯಿಂದ ಈ ಯೋಜನೆ ಜಾರಿಗೊಳ್ಳುತ್ತಿದ್ದು, ಏ.17 ವರೆಗೆ ಬೇರೆ ಬೇರೆ ರೂಪದ ಪ್ರಸ್ತುತಿಗಳು ನಡೆಯಲಿವೆ.
ಕಾರ್ಯಕ್ರಮ ಅಂಗವಾಗಿ ಕಾಞÂಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ಈಗಾಗಲೇ ಭಿತ್ತಿಪತ್ರ ರಚನೆ ಸ್ಪರ್ಧೆ ನಡೆದಿದೆ. 25ರಂದು ಸಂಜೆ 4 ಗಂಟೆಗೆ ಕಾಸರಗೋಡು ನೆಲ್ಲಿಕುಂಜೆ ಕರಾವಳಿಯಲ್ಲಿ ಕರಾವಳಿ ಮತ ಸಂದೇಶ ಯಾತ್ರೆ ಜರುಗಲಿದೆ. 27ರಂದು ಬೆಳಗ್ಗೆ 9 ಗಂಟೆಗೆ (ಬುಲ್ಲೆಟ್) ಬೈಕ್ ರ್ಯಾಲಿ ನಡೆಯಲಿದೆ. ಬೋವಿಕ್ಕಾನ, ಕುತ್ತಿಕೋಲು, ಪನತ್ತಡಿ, ಕಾಞÂಂಗಾಡ್, ಕಾಸರಗೋಡು ಪ್ರದೇಶಗಳಲ್ಲಿ ರ್ಯಾಲಿ ಜರುಗುವುದು. ಮಾ.29ರಂದು ಸಂಜೆ 4 ಗಂಟೆಗೆ ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ಫ್ಯೂಷನ್ ಷೋ ನಡೆಯಲಿದೆ.
ಬೀದಿ ನಾಟಕ ಈ ಅಂಗವಾಗಿ ನಡೆಯಲಿದ್ದು, ಏ.1ರಂದು ಬೆಳಗ್ಗೆ 9.30ಕ್ಕೆ ಹೊಸಂಗಡಿ, ಮಧ್ಯಾಹ್ನ 12 ಗಂಟೆಗೆ ಕುಂಬಳೆ, 3 ಗಂಟೆಗೆ ಪೆರ್ಲದಲ್ಲಿ, 2ರಂದು ಬೆಳಗ್ಗೆ 9.30ಕ್ಕೆ ಕಾಸರಗೋಡು, ಮಧ್ಯಾಹ್ನ 12 ಗಂಟೆಗೆ ಚೆರ್ಕಳ, 3 ಗಂಟೆಗೆ ಮುಳ್ಳೆರಿಯದಲ್ಲಿ, 3ರಂದು ಬೆಳಗ್ಗೆ 9.30ಕ್ಕೆ ಕುಂಡಂಕುಳಿ, ಮಧ್ಯಾಹ್ನ 12 ಗಂಟೆಗೆ ಚಟ್ಟಂಚಾಲ್, 3 ಗಂಟೆಗೆ ಉದುಮಾದಲ್ಲಿ, 4ರಂದು ಬೆಳಗ್ಗೆ 9.30ಕ್ಕೆ ಕಾ?ಂಗಾಡಿನಲ್ಲಿ, ಮಧ್ಯಾಹ್ನ 12 ಗಂಟೆಗೆ ನೀಲೇಶ್ವರದಲ್ಲಿ, 3 ಗಂಟೆಗೆ ಪನತ್ತಡಿಯಲ್ಲಿ, 5ರಂದು ಬೆಳಿಗ್ಗೆ 9.30ಕ್ಕೆ ಕಾಲಿಕ್ಕಡವಿನಲ್ಲಿ, ಮಧ್ಯಾಹ್ನ 12 ಗಂಟೆಗೆ ಚೀಮೇನಿಯಲ್ಲಿ, 3 ಗಂಟೆಗೆ ಕೊಡಕ್ಕಾಡಿನಲ್ಲಿ ಪ್ರಸ್ತುತಿ ನಡೆಯಲಿದೆ.
"ನನ್ನ ಮತ, ನನ್ನ ಹಕ್ಕು" ಎಂಬ ಸಂದೇಶದೊಂದಿಗೆ ಶಿಬಿರ ಈ ಸಂಬಂಧ ನಡೆಯಲಿದೆ. ಏ.8ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಮಧ್ಯಾಹ್ನ 2 ಗಂಟೆಗೆ ಎಲ್.ಬಿ.ಎಸ್.ಇಂಜಿನಿಯರಿಂಗ್ ಕಾಲೇಜಿನಲ್ಲಿ, ಏ.10ರಂದು ತ್ರಿಕರಿಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ, 11ರಂದು ಬೆಳಗ್ಗೆ 10 ಗಂಟೆಗೆ ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ, 16ರಂದು ಬೆಳಗ್ಗೆ 10 ಗಂಟೆಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಈ ಶಿಬಿರ ನಡೆಯಲಿದೆ.
ಸಾಮೂಹಿಕ ಓಟ ಮೂಲಕ ಜಾಗೃತಿ ಕಾರ್ಯಕ್ರಮ ಏ.12ರಂದು ಸಂಜೆ 5 ಗಂಟೆಗೆ ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿಯಿಂದ ತಾಲೂಕು ಕಚೇರಿ ವರೆಗೆ ನಡೆಯಲಿದೆ. ಮಲೆನಾಡ ಮತ ಸಂದೇಶ ಯಾತ್ರೆ ಏ.17ರಂದು ನಡೆಯಲಿದೆ.

