ಹಜ್ : ವೈಟಿಂಗ್ ಲಿಸ್ಟ್ ನಲ್ಲಿರುವವರು ಎ.5ರಂದು ಅರ್ಜಿ ಸಲ್ಲಿಸಬೇಕು
0
ಮಾರ್ಚ್ 25, 2019
ಕಾಸರಗೋಡು: ಈ ವರ್ಷ ರಾಜ್ಯ ಹಜ್ ಸಮಿತಿ ಮುಖಾಂತರ ಹಜ್‍ಗೆ ತೆರಳುವವರು ಅರ್ಜಿ ಸಲ್ಲಿಸಿ ವೈಟಿಂಗ್ ಲಿಸ್ಟ್‍ನಲ್ಲಿ ಅಳವಡಗೊಂಡು 01 ನಿಂದ 630 ವರೆಗಿನ ಸಂಖ್ಯೆಗಳಲ್ಲಿರುವವರಿಗೆ ಹಜ್‍ಗೆ ತೆರಳುವ ಅವಕಾಶವಿದೆ. ಇವರು ಮುಂಗಡ ಮೊಬಲಗು 81 ಸಾವಿರ ರೂ. ಪ್ರಥಮ ಬ್ಯಾಲೆನ್ಸ್ ಮೊಬಲಗು 1.20 ಲಕ್ಷ ರೂ. ಸೇರಿ 2.01 ಲಕ್ಷ ರೂ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿಯಿರಿಸಿ ಅಸಲಿ ರಶೀದಿ, ಮೆಡಿಕಲ್ ಫಿಟ್ ನೆಸ್ ಸರ್ಟಿಫಿಕೆಟ್, ಪಾಸ್‍ಪೆÇೀರ್ಟ್ ಗಾತ್ರದ ಫೆÇೀಟೋ ಲಗತ್ತಿಸಿದ ಅಸಲಿ ಪಾಸ್‍ಪೆÇೀರ್ಟ್ ಇತ್ಯಾದಿ ಎ.5ರ ಮುಂಚಿತವಾಗಿ ರಾಜ್ಯ ಹಜ್ ಸಮಿತಿ ಕಚೇರಿಯಲ್ಲಿ ಸಲ್ಲಿಸಬೇಕು.
ಈಗಾಗಲೇ ಅಸಲಿ ಪಾಸ್‍ಪೆÇೀರ್ಟ್ ಸಲ್ಲಿಸಿದವರು ಹಣ ಪಾವತಿಸಿದ ರಶೀದಿ, ಮೆಡಿಕಲ್ ಸರ್ಟಿಫಿಕೆಟ್ ಅಂಚೆ ಮೂಲಕ, ಕೊರಿಯರ್ ಮೂಲಕ ಸಲ್ಲಿಸಿದರೆ ಸಾಕು. ಇದೇ ವೇಳೆ ಈ ಹಿಂದೆ ಹಜ್‍ಗೆ ತೆರಳಲು ಅವಕಾಶ ಲಭಿಸಿ ಈಗಾಗಲೇ ಮುಂಗಡ ಮೊಬಲಗು 81 ಸಾವಿರ ರೂ. ಪಾವತಿಸಿದವರು, ಮೊದಲ ಬ್ಯಾಲೆನ್ಸ್ 12 ಸಾವಿರ ರೂ. ಠೇವಣಿಯಿರಿಸಿದ ರಶೀದಿ ರಾಜ್ಯ ಹಜ್ ಸಮಿತಿಗೆ ಎ.5ರ ಮುಂಚಿತವಾಗಿ ಸಲ್ಲಿಸಬೇಕು. ಮಾಹಿತಿಗಾಗಿ ಆಯಾ ಪ್ರದೇಶಗಳ ಹಜ್ ತರಬೇತುದಾರರನ್ನು, ಜಿಲ್ಲಾ ಹಜ್ ತರಬೇತುದಾರ ಎನ್.ಕೆ.ಅಮಾನುಲ್ಲ(9446111188) ಅವರನ್ನು ಸಂಪರ್ಕಿಸಬಹುದು ಎಂದು ಮಾಸ್ಟರ್ ತರಬೇತುದಾರ ಎನ್.ಪಿ.ಝೈನುದ್ದೀನ್ ತಿಳಿಸಿದರು.

