ಮೊಗ್ರಾಲ್‍ಪುತ್ತೂರು ಪಂಚಾಯತ್ ಗ್ರಾಮೋತ್ಸವ-ಇಂದು ಸಾಂಸ್ಕøತಿಕ ಮೆರವಣಿಗೆ
0
ಮಾರ್ಚ್ 10, 2019
ಕಾಸರಗೋಡು: ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ `ಗ್ರಾಮೋತ್ಸವ' ಅಂಗವಾಗಿ ಸಾಂಸ್ಕøತಿಕ ಮೆರವಣಿಗೆ ಮಾ.11ರಂದು ಜರಗಲಿದೆ.
ಮಧ್ಯಾಹ್ನ 3.30ಕ್ಕೆ ಎರಿಯಾಲ್‍ನಿಂದ ಆರಂಭಗೊಳುವ ಮೆರವಣಿಗೆ ಪಂಚಾಯತ್‍ನ ವಿವಿಧ ಕಡೆ ಪರ್ಯಟನೆ ನಡೆಸಿ ಕಲ್ಲಂಗಾಯಿಯ ಪಂಚಾಯತ್ ಕಚೇರಿ ಬಳಿ ಸಮಾರೋಪಗೊಳ್ಳಲಿದೆ. ಮಾಜಿ ಜನಪ್ರತಿನಿಧಿಗಳು, ರಾಜಕೀಯ-ಸಾಮಾಜಿಕ-ಸಾಂಸ್ಕøತಿಕ ನೇತಾರರು, ಸರಕಾರಿ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು, ಕುಟುಂಬಶ್ರೀ ಸದಸ್ಯರು, ಅಂಗನವಡಿ ಪ್ರತಿನಿಧಿಗಳು, ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು ಮೊದಲಾದವರು ಭಾಗವಹಿಸುವರು.
ಬಳಿಕ ನಡೆಯುವ ಸಾಂಸ್ಕøತಿಕ ಸಮ್ಮೇಳನವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಅಧ್ಯಕ್ಷತೆ ವಹಿಸುವರು. ಮಾಜಿ ಅಧ್ಯಕ್ಷರುಗಳನ್ನು ಅವರು ಅಭಿನಂದಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಪಂಚಾಯತ್ ವ್ಯಾಪ್ತಿಯ ಮಾಜಿ ಜನಪ್ರತಿನಿಧಿಗಳಿಗೆ ಅಭಿನಂದನೆ ಪತ್ರ ಹಸ್ತಾಂತರಿಸುವರು. ಪಂಚಾಯತ್‍ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಗೌರವಾರ್ಪಣೆ ನಡೆಸುವರು. ಯೋಜನೆ ನಿರ್ವಹಣೆ ಪೂರ್ಣಗೊಳಿಸಿದ ನಿರ್ವಹಣೆ ಸಿಬ್ಬಂದಿಗೆ ಪಂಚಾಯತ್ ಸಹಾಯಕ ನಿರ್ದೇಶಕ ಟಿ.ಜೆ.ಅರುಣ್ ಸಾಕ್ಷ್ಯಪತ್ರ ಹಸ್ತಾಂತರಿಸುವರು. ಪಂಚಾಯತ್‍ನ ವಿವಿಧ ಅಗತ್ಯಗಳಿಗೆ ಜಾಗ ಒದಗಿಸಿದವರಿಗೆ ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್ ಅಭಿನಂದನೆ ನಡೆಸುವರು. ವಿಲ್ಸನ್ ಪಿಲಿಕೋಡ್ ಸಾಂಸ್ಕøತಿಕ ಭಾಷಣ ನಡೆಸುವರು. ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿರುವರು. ನಂತರ ನಡೆಯುವ ಕಲಾಸಂಧ್ಯ ಕಾರ್ಯಕ್ರಮದಲ್ಲಿ ಕಾಸರಗೋಡಿನ ಕಲಾಪ್ರಕಾರಗಳ ಮತ್ತು ನಾಟಕ ಪ್ರಸ್ತುತಿ ನಡೆಯಲಿದೆ.




