ಚುನಾವಣೆ : ನಿರ್ಣಾಯಕರಾಗಲಿರುವ ಅನಿವಾಸಿ ಭಾರತೀಯ ಮತದಾರರು
0
ಮಾರ್ಚ್ 20, 2019
ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯ ಮತದಾರರು ನಿರ್ಣಾಯಕರಾಗಲಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 2643 ಮಂದಿ ಮತದಾರರ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 2554 ಮಂದಿ ಪುರುಷರು, 89 ಮಂದಿ ಮಹಿಳೆಯರಿದ್ದಾರೆ. ಮಾ.25 ವರೆಗೆ ಮತದಾತರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶಗಳಿವೆ. ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅನಿವಾಸಿ ಭಾರತೀಯ ಮತದಾರರಿರುವ ವಿಧಾನಸಭೆ ಕ್ಷೇತ್ರ ತ್ರಿಕರಿಪುರ ಆಗಿದೆ. ಇಲ್ಲಿ 888 ಮಂದಿ ಈ ಸಾಲಿನ ಮತದಾರರಿದ್ದು, ಇವರಲ್ಲಿ 869 ಮಂದಿ ಪುರುಷರು, 19 ಮಹಿಳೆಯರೂ ಇದ್ದಾರೆ. ಕಾಂಞಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ 726 ಅನಿವಾಸಿ ಭಾರತೀಯ ಮತದಾರರಿದ್ದು, 704 ಪುರುಷರು, 22 ಮಹಿಳೆಯರೂ ಈ ಸಾಲಿನಲ್ಲಿದ್ದಾರೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 611 ಆನಿವಾಸಿ ಭಾರತೀಯ ಮತದಾರರಿದ್ದಾರೆ. ಇವರಲ್ಲಿ 588 ಪುರುಷರು, 23 ಮಂದಿ ಮಹಿಳೆಯರೂ ಇದ್ದಾರೆ. ಉದುಮ ವಿಧಾನಸಭೆ ಕ್ಷೇತ್ರದಲ್ಲಿ 249 ಮಂದಿ ಆನಿವಾಸಿ ಭಾರತೀಯ ಮತದಾರರಿದ್ದು, 234 ಪುರುಷರು, 15 ಮಹಿಳೆಯರೂ ಇದ್ದಾರೆ.
ಅತಿ ಕಡಿಮೆ ಅನಿವಾಸಿ ಭಾರತೀಯ ಮತದಾರರಿರುವ ವಿಧಾನಸಭೆ ಕ್ಷೇತ್ರ ಕಾಸರಗೋಡು ಆಗಿದೆ. ಇಲ್ಲಿ 169 ಮಂದಿ ಈ ಸಾಲಿನ ಮತದಾರರಿದ್ದು, ಇವರಲ್ಲಿ 159 ಮಂದಿ ಪುರುಷರು, 10 ಮಂದಿ ಮಹಿಳೆಯರು ಇದ್ದಾರೆ.
ಉದ್ಯೋಗ, ಉದ್ದಿಮೆ ಇತ್ಯಾದಿ ಸಂಬಂಧ ವಿದೇಶದಲ್ಲಿ ನೆಲೆಸಿರುವ ಭಾರತೀಯ ನಿವಾಸಿಗಳಿಗೆ ಇಲ್ಲಿನ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಾಧ್ಯ. ನ್ಯಾಷನಲ್ ವೋಟರ್ಸ್ ಸರ್ವೀಸ್ ಪೆÇೀರ್ಟಲ್ ಮೂಲಕ ಆನ್‍ಲೈನ್ ಆಗಿ ಹೆಸರು ಸೇರ್ಪಡೆಗೆ ಮಾ.25 ರ ವರೆಗೆ ಅವಕಾಶ ನೀಡಲಾಗಿದೆ. ಆದರೆ ಪರ್ಯಾಯವಾಗಿ ಬೇರೊಬ್ಬರನ್ನು ಬಳಸಿ ಪೆÇ್ರೀಕ್ಸಿ ಮತದಾನಕ್ಕೆ ಅನುಮತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುತು ಚೀಟಿಯ ರೂಪದಲ್ಲಿ ಪಾಸ್‍ಪೆÇೀರ್ಟ್‍ನ್ನು ಅನಿವಾಸಿ ಭಾರತೀಯ ಮತದಾರರು ಜೊತೆಗೆ ತರಬೇಕು. ಜಿಲ್ಲೆಯಲ್ಲಿ 513 ಕೇಂದ್ರಗಳ 968 ಮತಗಟ್ಟೆಗಳಲ್ಲಿ ಎ.23 ರಂದು ಮತದಾನ ನಡೆಯಲಿದೆ.

