ವಿಶ್ವ ಬಾಯಿ ಆರೋಗ್ಯ ದಿನಾಚರಣೆ
0
ಮಾರ್ಚ್ 22, 2019
ಕಾಸರಗೋಡು: ವಿಶ್ವ ಬಾಯಿ(ವದನ) ಆರೋಗ್ಯ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಅಜಾನೂರು ಪ್ರತಿಭಾ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನಲ್ಲಿ ಶುಕ್ರವಾರ ಜರುಗಿತು.
ಜಿಲ್ಲಾ ಆರೋಗ್ಯ ಇಲಾಖೆ, ಅಜಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಕೋಸ್ಟಲ್ ಮಲಬಾರ್ ಬ್ರಾಂಚ್, ಪ್ರತಿಭಾ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಿತು.
ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಶಾಂತಿ ಕೆ. ಉದ್ಘಾಟಿಸಿದರು. ಗಂಗಾಧರನ್ ಕೆ.ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆಯ ದಂತ ಪರಿಣತ ಡಾ.ಪಿ.ಪವಿತ್ರನ್, ಡಾ. ಗಿರೀಶ್ ಕುಮಾರ್, ಸಹಾಯಕ ಲೆಪ್ರಸಿ ಅಧಿಕಾರಿ ಶಾಜಿ ಕುಮಾರ್ ವಿ.ಎನ್., ರವಿ ಕೋಳವಯಲ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ನಯನಾ ಸ್ವಾಗತಿಸಿ, ಆರೋಗ್ಯ ಪರಿವೀಕ್ಷಕ ಮಧುಸೂದನನ್ ವಂದಿಸಿದರು.
ಬಾಯಿಯ ಆರೋಗ್ಯ ಕುರಿತು ಡಾ.ಅತುಲ್ ಸಂತೋಷ್ ತರಗತಿ ನಡೆಸಿದರು. ಡಾ.ರಾಹುಲ್ ಎ.ಕೆ., ಡಾ.ರಾಹುಲ್ ನಂದಕುಮಾರ್ ಅವರ ನೇತೃತ್ವದಲ್ಲಿ ದಂತ ತಪಾಸಣೆ ಶಿಬಿರ ಜರುಗಿತು. 100ಕ್ಕೂ ಅಧಿಕ ಮಂದಿ ಭಾಗವಹಿಸಿದರು.

