ಅಡೂರು ಜಾತ್ರೋತ್ಸವ -ಯಕ್ಷಗಾನ ತಾಳಮದ್ದಳೆ
0
ಮಾರ್ಚ್ 22, 2019
ಮುಳ್ಳೇರಿಯ: ಅಡೂರು ಕ್ಷೇತ್ರ ಜಾತ್ರೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ `ಶ್ರೀ ಕೃಷ್ಣ ರಾಯಭಾರ' ಎಂಬ ಪ್ರಸಂಗ ತಾಳಮದ್ದಳೆ ನಡೆಯಿತು.
ಭಾಗವತರುಗಳಾಗಿ ನಿತೀಶ್‍ಕುಮಾರ್ ವೆಂಕಣಮೂಲೆ, ದಯಾನಂದ ಬಂದ್ಯಡ್ಕ, ಮೋಹನ ಮೆಣಸಿಕಾನ, ಹಿಮ್ಮೇಳನದಲ್ಲಿ ಅಡೂರು ಮೋಹನ ಸರಳಾಯ, ವಿಷ್ಣು ಶರಣ ಬನಾರಿ, ಬಿ.ಎಚ್.ಕೃಷ್ಣ ಪ್ರಸಾದ್, ಅರ್ಥದಾರಿಗಳಾಗಿ ಪ್ರಸಿದ್ಧ ವಾಗ್ಮಿ ಘನ ವಿದ್ವಾಂಸ ಜಬ್ಬಾರ್ ಸಮೋ ಸಂಪಾಜೆ, ಮಾತಿನಮಲ್ಲ ವೆಂಕಟ್ರಾಂ ಭಟ್ ಸುಳ್ಯ, ಬೆಳ್ಳಿಪ್ಪಾಡಿ ಸದಾಶಿವ ರೈ ಸಹಕರಿಸಿದರು.
ಯಕ್ಷಗಾನಕೂಟದಲ್ಲಿ ಭಾಗವಹಿಸಿದ ಕಲಾವಿದರನ್ನು ಉತ್ಸವ ಸಮಿತಿ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿ ಅಭಿನಂದಿಸಿದರು. ಮಹಾ ಮೇಧಾವಿ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಅವರನ್ನು ಹಿರಿಯ ಯಕ್ಷಗಾನ ಭಾಗವತ ವಿಶ್ವ ವಿನೋದ ಬನಾರಿ ಅವರು ಉತ್ಸವ ಸಮಿತಿಯ ಪರವಾಗಿ ಶಾಲು ಹೊದಿಸಿ ಗೌರವಿಸಿದರು. ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಸದಾಶಿವ ರೈ ಬೆಳ್ಳಿಪ್ಪಾಡಿ ಸ್ವಾಗತಿಸಿ, ಉತ್ಸವ ಸಮಿತಿಯ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ವಂದಿಸಿದರು.

