ವಿಶ್ವ ಜಲ ಸಂರಕ್ಷಣೆ ದಿನಾಚರಣೆ
0
ಮಾರ್ಚ್ 22, 2019
ಕಾಸರಗೋಡು: ವಿಶ್ವ ಜಲ ಸಂರಕ್ಷಣೆ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು.
ಸಮಾರಂಭ ಅಂಗವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಪಿ.ಬಿಜು, ಹರಿತ ಕೇರಳಂ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಶುಚಿತ್ವ ಮಿಷನ್ ಸಂಚಾಲಕ ಸಿ.ರಾಧಾಕೃಷ್ಣನ್, ಪ್ರಧಾನ ಕೃಷಿ ಅಧಿಕಾರಿ ಟಿಸಮ್ಮ ಥಾಮಸ್, ಎ.ಡಿ.ಸಿ.ನಿಖಿಲ್ ಮೊದಲಾದವರು ಉಪಸ್ಥಿತರಿದ್ದರು.

