ಬೇಳದಲ್ಲಿ ಒತ್ತೆಕೋಲ ಏ.4-5
0
ಮಾರ್ಚ್ 22, 2019
ಬದಿಯಡ್ಕ : ಬೇಳ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ವತಿಯಿಂದ ಬೇಳ ವಿಷ್ಣುಮೂರ್ತಿ ನಗರದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆದುಬರುತ್ತಿರುವ ಶ್ರೀ ಕುಮಾರಚಾಮುಂಡಿ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳ ಬಯಲಕೋಲ ಹಾಗೂ ಕೆಂಡಸೇವೆಯು ಏಪ್ರಿಲ್ 4 ಹಾಗೂ ಏಪ್ರಿಲ್ 5ರಂದು ಜರಗಲಿರುವುದು.
ಏ.04ರಂದು ರಾತ್ರಿ 7ರಿಂದ ವಿವಿಧ ಭಜನ ಸಂಘಗಳಿಂದ ಭಜನೆ, 8 ಗಂಟೆಗೆ ಏಣಿಯರ್ಪು ಕೋದಂಬರ್ತ್ ತರವಾಡು ದೈವಸ್ಥಾನದಿಂದ ಭಂಡಾರ ಹೊರಡುವುದು, 8 ಗಂಟೆಯಿಂದ ಸನಾತನ ಯಕ್ಷಾಲಯ ಮಂಗಳೂರು ಯಕ್ಷಗುರು ರಾಕೇಶ್ ರೈ ಅಡ್ಕ ಇವರ ಶಿಷ್ಯವೃಂದದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಗಿರೀಶ್ ರೈ ಕಕ್ಕೆಪದವು ಭಾಗವತಿಕೆಯಲ್ಲಿ `ಮಾ ನಿಷಾದ' ಯಕ್ಷಗಾನ ಬಯಲಾಟ, 8.30ಕ್ಕೆ ಬೇಳ ವಿಷ್ಣುಮೂರ್ತಿ ನಗರಕ್ಕೆ ಭಂಡಾರ ಆಗಮನ, 11ರಿಂದ 2 ಗಂಟೆಯ ತನಕ ಶ್ರೀ ಕುಮಾರ ಚಾಮುಂಡಿ, ಬಬ್ಬರ್ಯ ಇತ್ಯಾದಿ ದೈವಗಳಿಗೆ ಕೋಲ, ರಾತ್ರಿ 3 ಗಂಟೆಯಿಂದ 5ರ ತನಕ ಶ್ರೀ ವಿಷ್ಣುಮೂರ್ತಿ ದೈವದ ನೃತ್ಯ, ಅರಸಿನ ಹುಡಿ ಪ್ರಸಾದ ವಿತರಣೆ, ಪ್ರಾತಃಕಾಲ ಭಂಡಾರ ಹಿಂತಿರುಗುವುದು.
ಏ.5ರಂದು ಬೆಳಗ್ಗೆ 9 ಗಂಟೆಯಿಂದ ಮೇಲೇರಿ ಕೂಡುವುದು, ಸಾಯಂಕಾಲ ಸಂಧ್ಯಾದೀಪದ ಬಳಿಕ ಏಣಿಯರ್ಪು ಕೋದಂಬರ್ತ್ ತರವಾಡು ದೈವಸ್ಥಾನದಿಂದ ಭಂಡಾರ ಹೊರಡುವುದು, 7 ಗಂಟೆ ಭಂಡಾರ ಆಗಮನ, 7.15ಕ್ಕೆ ಉಳಿಯತ್ತಾಯ ಬ್ರಹ್ಮಶ್ರೀ ವೇದಮೂರ್ತಿ ವಿಷ್ಣು ಆಸ್ರರ ಆಗಮನ, ಸ್ವಾಗತ, ಮೇಲೇರಿಗೆ ಅಗ್ನಿಸ್ಪರ್ಶ, ಸಾಯಂಕಾಲ 6.30ರಿಂದ 8.30ರ ತನಕ ನಟರಾಜ್ ಡ್ಯಾನ್ಸ್ ಗ್ರೂಪ್ ಮತ್ತು ಶ್ರೀ ವಿಷ್ಣುಮೂರ್ತಿ ಬಾಲಗೋಕು ಇವರಿಂದ ನೃತ್ಯ ವೈವಿಧ್ಯ, 8.30ರಿಂದ ಸಭಾ ಕಾರ್ಯಕ್ರಮ, ರಾತ್ರಿ 8.30ರಿಂದ ಅನ್ನದಾನ, 9 ಗಂಟೆಯಿಂದ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗಾಯ್ಸ್ ಕುಡ್ಲ ಕ್ವೀನ್ಸ್ ಮಂಗಳೂರು ಇವರಿಂದ ನೃತ್ಯ ಸಿಂಚನ, ರಾತ್ರಿ 10ರಿಂದ 11ರ ತನಕ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ರಾತ್ರಿ 3ರಿಂದ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ (ಕೆಂಡಸೇವೆ), ಪ್ರಾತಃಕಾಲ 5 ಗಂಟೆಗೆ ಅರಸಿನ ಹುಡಿ ಪ್ರಸಾದ ವಿತರಣೆ, ಭಂಡಾರ ಹಿಂತಿರುಗುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ. ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ವಿನಂತಿಸಿಕೊಂಡಿದ್ದಾರೆ.

