ಕಾವಲು ಯೋಜನೆ ಅವಲೋಕನ ಸಭೆ
0
ಮಾರ್ಚ್ 22, 2019
ಕಾಸರಗೋಡು: ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಜಿಲ್ಲಾ ಮಟ್ಟದಲ್ಲಿ ಶಿಶು ಸಂರಕ್ಷಣೆ ಇಲಖೆಯ ಸಹಕಾರದೊಂದಿಗೆ ಜಾರಿಗೊಳಿಸುವ ಕಾವಲು ಯೋಜನೆಯ ಅವಲೋಕನ ಸಭೆ ಮತ್ತು ಜ್ಯುವೆನಲ್ ಜಸ್ಟಿಸ್ ಬೋರ್ಡ್, ಚೈಲ್ಡ್ ವೆಲ್ಪೇರ್ ಸಮಿತಿಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ವಿದಾಯ ಕೂಟ ಪರವನಡ್ಕ ಸರಕಾರಿ ಮಕ್ಕಳ ಗೃಹದಲ್ಲಿ ಶುಕ್ರವಾರ ಜರುಗಿತು.
ಉಪನ್ಯಾಯಮೂರ್ತಿ ಫಿಲಿಪ್ ಥಾಮಸ್ ಸಮಾರಂಭ ಉದ್ಘಾಟಿಸಿದರು. ಜ್ಯುವೆನಲ್ ಜಸ್ಟಿಸ್ ಬೋರ್ಡ್ ಪ್ರಧಾನ ನ್ಯಾಯಮೂರ್ತಿ ಶ್ರೀಜಾ ಜನಾರ್ದನನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಸಿಜೋ ಥಾಮಸ್, ಕೇಸ್ ವರ್ಕರ್ ಬಿ.ಅಖಿಲ್ ಯೋಜನೆ ಕುರಿತು ಮಾಹಿತಿ ನೀಡಿದರು. ಕಾನೂನು ಮತ್ತು ಪ್ರೊಬೇಷನ್ ಅಧಿಕಾರಿ ಶ್ರೀಜಿತ್ ಯೋಜನೆಯ ಅವಲೋಕನ ನಡೆಸಿದರು. ನಿವೃತ್ತರಾಗುತ್ತಿರುವ ಸದಸ್ಯರಾದ ಪಿ.ಕೆ.ಕುಂಞÂರಾಮನ್, ನ್ಯಾಯವಾದಿ ಪಿ.ಪಿ.ಮಣಿಯಮ್ಮ, ಮಾಧುರಿ ಎಸ್.ಬೋಸ್, ನ್ಯಾಯವದಿ ಫೌಝಿಯಾ ಶಂನಾಡ್ ಅವರಿಗೆ ವಿದಾಯ ಕೂಟ ಜರುಗಿತು. ಉಪನ್ಯಾಯಮೂರ್ತಿ ಫಿಲಿಪ್ ಥಾಮಸ್ ಮತ್ತು ನ್ಯಾಯಮೂರ್ತಿ ಪಿ.ಪಿ.ಶ್ಯಾಮಲಾದೇವಿ ನೆನಪಿನಕಾಣಿಕೆ ಹಸ್ತಾಂತರಿಸಿದರು.
ಜ್ಯುವೆನೆಲ್ ಜಸ್ಟಿಸ್ ಬೋರ್ಡ್ ಸದಸ್ಯರಾದ ಪಿ.ಬೇಬಿ, ಬಿ.ಮೋಹನ್ ಕುಮಾರ್, ಚೈಲ್ಡ್ ವೆಲ್ಫೇರ್ ಸಮಿತಿ ಸದಸ್ಯರಾದ ರಜಿತಾ, ನ್ಯಾಯವಾದಿ ಪಿ.ಕೆ.ಪ್ರಿಯಾ, ಮಹಿಳಾ ಘಟಕ ಸಿ.ಐ.ಭಾನುಮತಿ, ಡಾ.ಶಾಂತಿ, ಮೋಹನ್ ಮಾಂಗಾಡ್, ಚೈಲ್ಡ್ ಲೈನ್ ನೋಡೆಲ್ ಸಂಚಾಲಕ ಅನೀಷ್ ಜೋಸ್, ಅನಿಲ್ ಮಾಸ್ತರ್, ಅಭಿಲಾಷ್ ಉಪಸ್ಥಿತರಿದ್ದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ಸ್ವಾಗತಿಸಿ, ಮಕ್ಕಳ ಗೃಹ ವರಿಷ್ಠಾಧಿಕಾರಿ ಪಿ.ಎಂ.ಗೀತಾಕುಮಾರಿ ವಂದಿಸಿದರು.

