ಎಡನೀರು ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ- ಶಿಕ್ಷಕ ವೃತ್ತಿಗೆ ನಿವೃತ್ತಿ ಇಲ್ಲ-ಜೀವನ ಪ್ರವೃತ್ತಿ-ಎಡನೀರು ಶ್ರೀ
0
ಮಾರ್ಚ್ 22, 2019
ಬದಿಯಡ್ಕ: ಎಡನೀರು ಮಠದ ಆಡಳಿತದಲ್ಲಿ ನಡೆಸಲ್ಪಡುವ ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ 2018-19 ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಮುಖ್ಯೋಪಾಧ್ಯಾಯಿನಿ ಶಾರದಾ ಅಜೆಕ್ಕೋಡು, ಉಪನ್ಯಾಸಕ ಗಂಗಾಧರನ್, ಶಿಕ್ಷಕಿ ಅನಿತಾ ಕುಮಾರಿ ಮತ್ತು ವೆಂಕಟ ಭಟ್ ಎಡನೀರು ಇವರನ್ನು ಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ವಿದಾಯ ಸಮಾರಂಭ ಬೀಳ್ಕೊಡಲಾಯಿತು.
ಈ ಸಂದರ್ಭ ಮಾತನಾಡಿದ ಶ್ರೀಮದ್ ಎಡನೀರು ಮಠಾಧೀಶರು, ವೃತ್ತಿಯಿಂದ ನಿವೃತ್ತಿ ಎನ್ನುವುದು ಆಧುನಿಕ ವ್ಯವಸ್ಥೆಯ ಭಾಗವಾಗಿರುತ್ತದೆ. ಆದರೆ ಶಿಕ್ಷಕನಾದವನು ತಿದ್ದಿ, ಮಾರ್ಗದರ್ಶನ ನೀಡಿ ಮುನ್ನಡೆಸುವ ಪ್ರಕ್ರಿಯೆಗೆ ನಿವೃತ್ತಿ ಎನ್ನುವುದಿಲ್ಲ.ಅದು ವ್ಯಾಪಕ ಅರ್ಥ ವ್ಯಾಪ್ತಿಹೊಂದಿದ್ದು, ಈ ನಿಟ್ಟಿನಲ್ಲಿ ಸದಾ ಸಾಮಾಜಿಕ ಜವಾಬ್ದಾರಿಯನ್ನು ಅರ್ಥೈಸಿ ನಿವೃತ್ತಿಯ ಬಳಿಕವೂ ಪ್ರವೃತ್ತರಾಗಿರುವುದು ಶಿಕ್ಷಕರಿಗೆ ಮಾತ್ರವಿರುವ ಸುಯೋಗವಾಗಿದೆ ಎಂದು ಆಶೀರ್ವದಿಸಿದರು.
ಶಾಲೆಯ ನಿವೃತ್ತ ಅಧ್ಯಾಪಕ, ರಾಜ್ಯಪ್ರಶಸ್ತಿ ವಿಜೇತ ಬಾಲಕೃಷ್ಣ ಓರ್ಕೂಡ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಿಕ್ಷಕಿಯರಾದ ಜ್ಯೋತಿಲಕ್ಷ್ಮಿ ಸ್ವಾಗತಿಸಿ, ಶೈಲಜಾ ಕುಮಾರಿ ವಂದಿಸಿದರು. ರಾಮ ಮೋಹನ ಕೆದಿಲಾಯ ಕಾರ್ಯಕ್ರಮ ನಿರೂಪಣೆಗೈದರು. ಸಂಸ್ಕೃತ ಅಧ್ಯಾಪಕ ಮಧುಸೂದನ ಸಹಕರಿಸಿದರು.

