HEALTH TIPS

ಮೊಗ್ರಾಲ್‍ಪುತ್ತೂರು ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಅಪಾರ ಅವಕಾಶ

ಕುಂಬಳೆ: ಮೊಗ್ರಾಲ್‍ಪುತ್ತೂರು ಬೆದ್ರಡ್ಕ ಬಳಿ ಕಾರ್ಯಾಚರಿಸುವ ಸರಕಾರಿ ತಾಂತ್ರಿಕ ಹೈಸ್ಕೂಲ್‍ನಲ್ಲಿ 2019 ಎಪ್ರಿಲ್ ಪ್ರಥಮ ವಾರದಿಂದ ಪ್ರವೇಶಕ್ಕಿರುವ ಅರ್ಜಿ ಫಾರಂಗಳನ್ನು ವಿತರಿಸಲಿದೆ. ಕೇರಳ ಸರಕಾರದ ಟೆಕ್ನಿಕಲ್ ಎಜ್ಯುಕೇಶನ್ ಬೋರ್ಡಿನ ಅಂಗೀಕಾರಕ್ಕೊಳಪಟ್ಟ ಸರಕಾರಿ ತಾಂತ್ರಿಕ ಹೈಸ್ಕೂಲ್‍ನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ 8 ನೇ ತರಗತಿಯಿಂದ 10 ನೇ ತರಗತಿ ತನಕ ಉಚಿತ ಶಿಕ್ಷಣದ ಅವಕಾಶ ಇದೆ. 7 ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳು ಇಲ್ಲಿ 8 ನೇ ತರಗತಿಗೆ ಪ್ರವೇಶ ಪಡೆಯಬಹುದು. ಕನ್ನಡ ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ ಕಳೆದ ಕೆಲವು ವರ್ಷಗಳಿಂದ ದ್ವಿತೀಯ ಭಾಷೆ ಕನ್ನಡವನ್ನು ಸೇರ್ಪಡೆಗೊಳಿಸಲಾಗಿದೆ. ಟಿಎಚ್‍ಎನ್‍ಎಲ್‍ಸಿ ಪಾಸಾದ ವಿದ್ಯಾರ್ಥಿಗಳಿಗೆ ಮೀಸಲಾತಿ, ಕೋರ್ಸ್ ಪೂರ್ತೀಕರಿಸಿದವರಿಗೆ 3 ವರ್ಷದ ಎಂಜಿನಿಯರಿಂಗ್ ಕೋರ್ಸ್ ಮೂಲಕ ಬಿಟೆಕ್ ಮಾಡುವ ಅವಕಾಶವಿದೆ. ಆರ್ಹ ವಿದ್ಯಾರ್ಥಿಗಳಿಗೆ ಸರಕಾರದ ವಿವಿಧ ಸ್ಕಾಲರ್‍ಶಿಪ್ ಲಭಿಸುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯಿದೆ. ಶಾಲಾ ಮಟ್ಟದಲ್ಲಿ ಕಲಾ ಕ್ರೀಡಾ ಚಟುವಟಿಕೆಗಳಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ನೇರವಾಗಿ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಭಾಗವಹಿಸಬಹುದು. ಜೊತೆಗೆ ಗ್ರೇಡ್ ಲಭಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್‍ಮಾರ್ಕ್ ಲಭಿಸುವುದು. 2014-15 ನೇ ವರ್ಷದಿಂದ ಹೆಚ್ಚುವರಿ ಪ್ರಾಯೋಗಿಕ ತರಬೇತಿಯನ್ನು ಎನ್‍ಎನ್‍ಕ್ಯೂಎಫ್ ಸಮಾನವಾದ ಪ್ರತ್ಯೇಕ ಪ್ರಮಾಣ ಪತ್ರ ನೀಡಲಾಗಿದೆ. ಪ್ರೌಢ ಶಾಲೆಯಲ್ಲಿ ಸಾಮಾನ್ಯ ವಿಷಯಗಳ ಹೊರತಾಗಿ ಇಲೆಕ್ಟ್ರಿಕಲ್, ಇಲೆಕ್ಟ್ರೊನಿಕ್ಸ್, ಫಿಟ್ಟಿಂಗ್, ವೆಲ್ಡಿಂಗ್, ಟ್ರೇಡ್‍ಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಿ ಟ್ರೇಡ್ ಅಂಗೀಕೃತ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕನ್ನಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದು ಉದ್ಯೋಗ ಗಿಟ್ಟಿಸುವ ನಿಟ್ಟಿನಲ್ಲಿ ಆಸಕ್ತಿವಹಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವರು. ಹೋರಾಟ ಮೂಲಕ ಪಡೆದ ಸೌಲಭ್ಯಗಳನ್ನು ಉಳಿಸಿ ಕನ್ನಡ ಭಾಷೆ, ಸಂಸ್ಕøತಿಯನ್ನು ಬೆಳೆಸುವ ಪ್ರಯತ್ನ ಕನ್ನಡ ಭಾಷಾಭಿಮಾನಿಗಳೆಲ್ಲರು ಮಾಡಬೇಕೆಂದು ಕನ್ನಡ ಹೋರಾಟ ಸಮಿತಿಯ ಪ್ರಕಟನೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries