ಅಮ್ಮಂಗೋಡು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ- ವಾರ್ಷಿಕೋತ್ಸವ, ದೈವಂಕಟ್ಟು ಹಾಗೂ ಒತ್ತೆಕೋಲ ಮಹೋತ್ಸವ
0
ಮಾರ್ಚ್ 25, 2019
ಮುಳ್ಳೇರಿಯ: ಮುಳಿಯಾರಿನ ಅಮ್ಮಂಗೋಡು ಸತ್ಯನಾರಾಯಣಪುರದ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಸನ್ನಿಧಿಯಲ್ಲಿ ಏ. 19 ರಿಂದ 22 ರವರೆಗೆ ವಾರ್ಷಿಕೋತ್ಸವ, ದೈವಂಕಟ್ಟು ಹಾಗೂ ಒತ್ತೆಕ್ಕೋಲ ಮಹೋತ್ಸವವು ವಿಜೃಂಭಣೆಯಿಂದ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣಪೂಜೆ, ರಕ್ತೇಶ್ವರಿ ಕೋಲ, ರಕ್ತೇಶ್ವರಿ ಗುಳಿಗ, ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ, ಗುಳಿಗನ ಕೋಲ, ಹರಕೆ ಕೋಲ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಕಾರ್ಯಕ್ರಮದ ಅಂಗವಾಗಿ ಏ.19 ರಂದು ಶುಕ್ರವಾರ ಬೆಳಿಗ್ಗೆ 8.ರಿಂದ ಗಣಹೋಮ, ನವಕಾಭಿಷೇಕ, ನಾಗತಂಬಿಲ, ಮಧ್ಯಾಹ್ನ 1.ರಿಂದ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಅಪರಾಹ್ನ 3.ರಿಂದ ಭಜನೆ, ಸಂಜೆ 4.ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
ರಾತ್ರಿ 8.ಕ್ಕೆ ಭಂಡಾರ ಇಳಿಸುವುದು, ಶ್ರೀರಕ್ತೇಶ್ವರಿ ದೈವದ ಬೂಲ್ಯ ನೀಡುವುದು. ಅನ್ನದಾನ ನಡೆಯಲಿದೆ. ರಾತ್ರಿ 8.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಏ.20 ಶನಿವಾರ ಬೆಳಿಗ್ಗೆ 8.ರಿಂದ ಶ್ರೀ ರಕ್ತೇಶ್ವರಿ ದೈವದ ಪ್ರಾರಂಭ, ಪ್ರಸಾದ ವಿತರಣೆ, ಉಮ್ಮಟ ಗುಳಿಗ ಕೋಲ, ಮಧ್ಯಾಹ್ನ 1.ರಿಂದ ಅನ್ನದಾನ
ಸಂಜೆ 4.ರಿಂದ ಮೇಲೇರಿ ಸೇರಿಸಿಸುವುದು, ಅಗ್ನಿಸ್ಪರ್ಶ, ಶ್ರೀ ವಿಷ್ಣುಮೂರ್ತಿ ದೈವದ ಬೂಲ್ಯ ನೀಡುವುದು ನಡೆಯಲಿದೆ. ರಾತ್ರಿ 9.ರಿಂದ ಅನ್ನದಾನ
9. ರಿಂದ 10.ರವರೆಗೆ ನಡೆಯಲಿರುವ ಧಾರ್ಮಿಕ ಸಭೆಯಲಲಿ ಚಿತ್ರ ನಿರ್ದೇಶಕ ಅಲಿ ಅಕ್ಬರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮಲ್ಲ ಶ್ರೀಕ್ಷೇತ್ರದಾಡಳಿತ ಮೊಕ್ತೇಸರ ಆನೆಮಜಲು ಶ್ರೀ ವಿಷ್ಣು ಭಟ್ ಉಪಸ್ಥಿತರಿರುವರು. ರಾತ್ರಿ 10.30 ರಿಂದ ತಿರುವಾದಿರ ನೃತ್ಯ, ರಾತ್ರಿ 11.30 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ.
ಮಾ.21 ರಂದು ಭಾನುವಾರ ಬೆಳಿಗ್ಗೆ 12.30 ರಿಂದ 4.30 ವರೆಗೆ ಭಕ್ತಿ ಗಾನಮೇಳ, ಬೆಳಿಗ್ಗೆ 5.ರಿಂದ ಶ್ರೀ ವಿಷ್ಣು ಮೂರ್ತಿ ದೈವದ ಅಗ್ನಿಪ್ರವೇಶ ( ಕೆಂಡ ಸೇವೆ ), ಬೆಳಿಗ್ಗೆ 10.ರಿಂದ ಗುಳಿಗನ ಕೋಲ, ಮಧ್ಯಾಹ್ನ 1.ರಿಂದ ಅನ್ನದಾನ, ಸಂಜೆ 3. ರಿಂದ ಭಜನೆ, ರಾತ್ರಿ 8.ರಿಂದ ಶ್ರೀ ವಿಷ್ಣುಮೂರ್ತಿ ದೈವದ ಬೂಲ್ಯ ನೀಡುವುದು, ಅನ್ನದಾನ ನಡೆಯಲಿದೆ.
ಮಾ.22 ರಂದು ಸೋಮವಾರ ಬೆಳಿಗ್ಗೆ 8.ರಿಂದ ಶ್ರೀ ವಿಷ್ಣುಮೂರ್ತಿ ದೈವದ ಹರಕೆ ಕೋಲ, ಪ್ರಸಾದ ವಿತರಣೆ
ಮಧ್ಯಾಹ್ನ 1. ರಿಂದ ಅನ್ನದಾನ ನಡೆಯಲಿದ್ದು, ಭಕ್ತ ಮಹಾಜನರೆಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಅಮ್ಮಂಗೋಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.

