ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‍ನ ಕುಂಜತ್ತೂರು ಶಾಖೆ ಸ್ಥಳಾಂತರ
0
ಮಾರ್ಚ್ 25, 2019
ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‍ನ ಕುಂಜತ್ತೂರಿನ ಸಾಯಂ(ಈವಿನಿಂಗ್ ಬ್ರಾಂಚ್) ಶಾಖೆ ತಲಪಾಡಿಯಲ್ಲಿರುವ ನೂತನ ಕಟ್ಟಡಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡಿತು.
ಶಾಖೆಯ ಔಪಚಾರಿಕ ಉದ್ಘಾಟನೆಯನ್ನು ನಿವೃತ್ತ ಉಪಜಿಲ್ಲಾಧಿಕಾರಿ ಹಾಗು ಹಿರಿಯ ಸಹಕಾರಿ ವಾಸುದೇವನ್ ನಿರ್ವಹಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್‍ನ ಕಾರ್ಯದರ್ಶಿ ರಾಜನ್ ನಾಯರ್ ವಹಿಸಿದರು. ಶಾಖೆಯ ರಕ್ಷಣಾ ಲಾಕರನ್ನು ಉದ್ಯಮಿ ಪಿ.ಕೆ.ರವೀಂದ್ರನಾಥ್ ಶೆಟ್ಟಿ ಉದ್ಘಾಟಿಸಿದರು. ಗ್ರಾಹಕರ ಹೆಚ್ಚಿನ ಅನುಕೂಲತೆಗಾಗಿ ಕುಂಜತ್ತೂರಿನ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಗ್ರಾಹಕರ ಬೇಡಿಕೆಯಂತೆ ಸ್ಥಳಾಂತರಗೊಳಿಸಿರುವುದಾಗಿದೆ ಮಂಜೇಶ್ವರ ಸಹಕಾರಿ ಬ್ಯಾಂಕ್‍ನ ಸಂಬಂಧಪಟ್ಟವರು ತಿಳಿಸಿದ್ದಾರೆ.

