ದೆಹಲಿ: ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ. ಆದರೆ ಭಾರತೀಯರ ಕುರಿತ ಆ ಒಂದು ಸಂಗತಿ ಮಾತ್ರ ಗೂಗಲ್ ಗೆ ಇನ್ನೂ ಅರ್ಥವಾಗದ ವಿಷಯವಾಗಿ ಉಳಿದುಹೋಗಿದೆ.
ವಿಷಯ ಏನೂ ಅಂದ್ರೆ......... ಅದೇ ವಿವಾಹಕ್ಕೆ ಸಂಬಂಧಿಸಿದ ವಿಷಯ. ಭಾರತೀಯರು ಯದ್ವಾ ತದ್ವಾ ವಿವಾಹದ ಬಗ್ಗೆಯೇ ಗೂಗಲ್ ಮಾಡುತ್ತಿರುತ್ತಾರಂತೆ. ಇದರಿಂದ ದಿಕ್ಕೆಟ್ಟಂತಾಗಿರುವ ಗೂಗಲ್ ಟ್ವಿಟರ್ ನಲ್ಲಿ ತಾನೇ ಪ್ರಶ್ನೆಯೊಂದನ್ನು ಕೇಳಿದೆ. ಮದುವೆಯಾಗುವುದಕ್ಕೆ ಗೂಗಲ್ ನ್ನು ಏಕೆ ಕೇಳುತ್ತಿರುತ್ತೀರಿ ಎಂಬುದನ್ನು ನಿಜವಾಗಿಯೂ..... ನಿಜವಾಗಿಯೂ ನಾವು ತಿಳಿದುಕೊಳ್ಳಬೇಕಿದೆ ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ.

ಈ ಮಧ್ಯೆ ನಾವೇನು ಕಮ್ಮಿ ಗೂಗಲ್ ಗೇ ಗೂಗ್ಲಿ ಎಸೆದಿರುವ ಟ್ವಿಟರ್ ಗ್ರಾಹಕರು, ಐ ಆಮ್ ರಿಯಲಿ ರಿಯಲಿ ಸಾರಿ....ನೀವು ನಮ್ಮಂತಹ ಏಕಾಂಗಿಗಳ ಜೊತೆ ವ್ಯವಹರಿಸಬೇಕು ಎಂದು ಗೂಗಲ್ ನ್ನೇ ಟ್ರೋಲ್ ಮಾಡಿದ್ದಾರೆ.Google India (@GoogleIndia) _ Twitter
ಇನ್ನೂ ಕೆಲವರು ನಮಗೆ ನಮ್ಮ ಲೊಕೇಷನ್ ನ್ನು ಏಕೆ ಗೂಗಲ್ ಪ್ರತಿ ಬಾರಿಯೂ ಕೇಳುತ್ತದೆ ಎಂಬುದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.