ಪಳ್ಳತ್ತಡ್ಕ ಶಾಲೆಯಲ್ಲಿ ಬಾಲಸಭೆಯ ವಾರ್ಷಿಕ ಸಮಾರೋಪ-ಸನ್ಮಾನ
0
ಮಾರ್ಚ್ 10, 2019
ಬದಿಯಡ್ಕ: ಪಳ್ಳತ್ತಡ್ಕ ಶಾಲೆಯಲ್ಲಿ ಬಾಲಸಭೆ ಸಮಾರೋಪ ಸಮಾರಂಭವು ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನೆರವೇರಿತು.
ಈ ಸಂದರ್ಭದಲ್ಲಿ ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿರ್ಮಲ್ ಕುಮಾರ್ ಇವರಿಗೆ ಶಾಲಾ ವತಿಯಿಂದ ಮುಖ್ಯೋಪಾಧ್ಯಾಯ ಮಣಿ.ಎಂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು ಶಾಲೆಯ ಬಗ್ಗೆ ಅಧ್ಯಾಪಕ ವೃಂದ ಹಾಗೂ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜೊತೆಗೆ ಮಕ್ಕಳಿಗೆ ಆಟ, ಕಥೆ, ಮ್ಯಾಜಿಕ್, ನೃತ್ಯ ಮೊದಲಾದ ಚಟುವಟಿಕೆಗಳನ್ನು ನೀಡುವುದರ ಮೂಲಕ ಎಲ್ಲರ ಮೆಚ್ಚುಗೆ ಪಡೆದರು.ಉತ್ತಮ ಸಂದೇಶವನ್ನು ನೀಡಿ ಬಾಲಸಭೆಗೆ ಶುಭ ಹಾರೈಸಿದರು.




