ಸ್ವಚ್ಛತಾ ಅಭಿಯಾನ
0
ಮಾರ್ಚ್ 10, 2019
ಮಂಜೇಶ್ವರ: ಮಂಗಳೂರಿನ ಸಿ.ಒ.ಡಿ.ಪಿ ಪ್ರವರ್ತಿತ ಪ್ರಜ್ಞಾ ಮಹಾಸಂಘದ ವತಿಯಿಂದ ವರ್ಕಾಡಿ ಚರ್ಚ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ವರ್ಕಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುನಿತ ಡಿ'ಸೋಜ ಉದ್ಘಾಟಿಸಿದರು. ವರ್ಕಾಡಿ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಜೆಸಿಂತ ಡಿ'ಸೋಜ ಹಾಗೂ ಸಿ.ಒ.ಡಿ.ಪಿ ಸಂಸ್ಧೆಯ ಕಾರ್ಯಕರ್ತೆ ಮಮತಾ, ಹಾಗೂ ವಿವಿಧ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




