ಕಣ್ಣೂರು ವಿವಿ ದ್ವಿದಿನ ಸಾಹಿತ್ಯ ಶಿಬಿರ ಸಮಾರೋಪ
0
ಮಾರ್ಚ್ 10, 2019
ಮುಳ್ಳೇರಿಯ: ಬರಹಗಾರನಾದವನ ಲಕ್ಷ್ಯ ಧನಪ್ರಾಪ್ತಿ ಮತ್ತು ಪ್ರಶಸ್ತಿ-ಬಿರುದುಗಳತ್ತ ಇರಬಾರದು ಎಂದು ಖ್ಯಾತ ಮಲೆಯಾಳ ಸಾಹಿತಿ ಅಷ್ಟಮೂರ್ತಿ ಅವರು ತಿಳಿಸಿದರು.
ಕಣ್ಣೂರು ವಿವಿ ಯೂನಿಯನ್ ಆಯೋಜಿಸಿದ ಎರಡು ದಿನಗಳ ಸಾಹಿತ್ಯ ಶಿಬಿರದ ನೀಲೇಶ್ವರ ಡಾ.ವಿ.ಕೆ.ರಾಜನ್ ಸ್ಮಾರಕ ಕಲಾಲಯದಲ್ಲಿ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಪ್ರಲೋಭನೆಗೆ ಒಳಗಾಗದೆ, ನಿಷ್ಪಕ್ಷಪಾತವಾಗಿ, ವಿಶಾಲ ಹೃದಯದಿಂದ ಬರಹಗಳು ಮೂಡಿಬರಬೇಕು. ಮಾನವೀಯತೆ ಮತ್ತು ವಿಶ್ವ ಮಾನವತೆ ಬರಹಗಾರನ ಮೂಲ ಘೋಷವಾಕ್ಯವಾಗಿರಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ವಿವಿ ಯೂನಿಯನ್ ಅಧ್ಯಕ್ಷೆ ಅಂಬಿಳಿ ವಿ.ವಿ. ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಸಜೀವನ್, ಡಾ.ಎ.ಎಂ.ಶ್ರೀಧರನ್, ಸನೂಫ್ ವಿ.ವಿ, ಮನೋಹರನ್, ಪ್ರಜಿಲ್ ಮೊದಲಾದವರು ಉಪಸ್ಥಿತರಿದ್ದರು.ಬಳಿಕ ವಿವಿಧ ವಿಭಾಗಗಳಲ್ಲಿ ವಿಷ್ಣುಮಂಗಲಂ, ಸಿ.ಎಂ.ವಿನಯಚಂದ್ರನ್, ಸೂರಜ್, ಸಂತೋಷ್ ತರಗತಿಗಳನ್ನು ನಡೆಸಿದರು. ಶಿಬಿರದ ಅತ್ಯುತ್ತಮ ಕಥೆಗಾರನಾಗಿ ತಲಶ್ಚೇರಿ ಬ್ರಿನ್ನಿಯನ್ ಕಾಲೇಜಿನ ವಿದ್ಯಾರ್ಥಿ ಅಮನ್ ರಾಜ್, ಕವಿಯಾಗಿ ಶ್ರೀಕಂಠಪುರಂ ಎಸ್.ಇ.ಎಸ್ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಇ ಅವರನ್ನು ಆರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.




