ಮಾ.13 ರಂದು ಬಾಕ್ರಬೈಲಿನಲ್ಲಿ ಅಶ್ವತ್ಥೋಪನಯನ ಕಾರ್ಯಕ್ರಮ
0
ಮಾರ್ಚ್ 10, 2019
ಮಂಜೇಶ್ವರ: ಬಾಕ್ರಬೈಲು ಶ್ರೀ ಸೂರ್ಯೇಶ್ವರ ಕಲಾಮಂದಿರದ ವಠಾರದಲ್ಲಿ ಶ್ರೀ ಗಣೇಶ ಮಂದಿರಕ್ಕೆ ಅಭಿಮುಖವಾಗಿ ನಿರ್ಮಿಸಿದ ನೂತನ ಕಟ್ಟೆಯಲ್ಲಿ ವೇದಮೂರ್ತಿ ಪೆÇಳ್ಳಕಜೆ ಗೋವಿಂದ ಭಟ್ ಅವರ ಆಶೀರ್ವಾದದೊಂದಿಗೆ ವೇದಮೂರ್ತಿ ನಡಿಬೈಲು ಶಂಕರನಾರಾಯಣ ಭಟ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶ್ವರೂಪೀ ಶ್ರೀ ಮನ್ನಾರಾಯಣ ಪ್ರೀತ್ಯರ್ಥ ಅಶ್ವತ್ಥೋಪನಯನ ಕಾರ್ಯಕ್ರಮ ಮಾ.13ರಂದು ಬೆಳಿಗ್ಗೆ 10.59ರ ವೃಷಭ ಲಗ್ನ ಸುಮುಹೂರ್ತದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಮಾ.12ರಂದು ಸಂಜೆ 6ಗಂಟೆಗೆ ಅಶ್ವತ್ಥ ಕಟ್ಟೆ ಪರಿಗ್ರಹ, ಸ್ಥಳ ಶುದ್ಧಿ, ಪ್ರಾರ್ಥನೆ, ಪುಣ್ಯಾಹವಾಚನ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ, ಉದಕಶಾಂತಿಕಲಶ ಪ್ರತಿಷ್ಠೆ, ವೇದಪಾರಾಯಣ ನಡೆಯಲಿದೆ. ಮಾ.13ರಂದು ಬೆಳಿಗ್ಗೆ 7ಕ್ಕೆ ನಾಂದೀ ಪುಣ್ಯಾಹ ಉಪನಯನ ಪೂರ್ವಕ ವಿವಾಹಾದಿ ಕರ್ಮಾಂಗ ಹೋಮಗಳು, 10.59ಕ್ಕೆ ಅಶ್ವತ್ಥೋಪನಯನ, ವೃಂದಾ - ಅಶ್ವಥನಾರಾಯಣ ವಿವಾಹೋತ್ಸವ, ತ್ರಿಮೂತ್ರಿ ಸಹಿತ ಅಶ್ವಥ - ನಾರಾಯಣ ಪೂಜೆ, ಅಷ್ಟಾವಧಾನ, ಮಹಾಮಂಗಳಾರತಿ, ಕಟೀಲು ಮೇಳದ ಯಕ್ಷಗಾನದ ಪ್ರಯುಕ್ತ ಮಧ್ಯಾಹ್ನ ಪೂಜೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಆಶೀರ್ವಚನ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 8.30ರಿಂದ ಬಾಕ್ರಬೈಲು ಶ್ರೀ ಸೂರ್ಯೇಶ್ವರ ಕಲಾ ಮಂದಿರದ ಮುಂಭಾಗದಲ್ಲಿ ಕಟೀಲು ಶ್ರೀ ದುಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಇದರ ಅಂಗವಾಗಿ ಚೌಕಿ ಪೂಜೆ ಮತ್ತು ಅನ್ನ ಸಂತರ್ಪಣೆ ಜರಗಲಿದೆ.




