ಭಕ್ತ ಜನರ ಸಾನಿಧ್ಯದೊಂದಿಗೆ ಜಮ್ಮದ ಮನೆ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ
0
ಮಾರ್ಚ್ 22, 2019
ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟು ಗ್ರಾಮದ ಜಮ್ಮದ ಮನೆಯಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ದುರ್ಗಾಪರಮೇಶ್ವರಿ ಹಾಗೂ ಪರಿವಾರ ದೇವರುಗಳ ಬಿಂಬ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಶುಕ್ರವಾರ ಭಕ್ತ ಜನರ ಸಾನಿಧ್ಯದೊಂದಿಗೆ ಭಕ್ತಿ ಸಂಭ್ರಮದಿಂದ ಜರಗಿತು.
ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಿಂದ ವೇದಮೂರ್ತಿ ಶ್ರೀಕೃಷ್ಣ ಭಟ್ ಕಣ್ವತೀರ್ಥ ಇವರ ನೇತೃತ್ವದಲ್ಲಿ ಹಾಗೂ ಒಡಿಯೂರು ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಶುಕ್ರವಾರ ಬೆಳಿಗ್ಗೆ 6.45 ರಿಂದ 7.10 ರ ಮೀನ ಲಗ್ನದಲ್ಲಿ ದುರ್ಗಾಪರಮೇಶ್ವರಿ ಮಾತೆಗೆ ಮತ್ತು ಮಹಾಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಚಂಡಿಕಾ ಯಾಗ ಮಹಾಪೂಜೆ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮ, ಗೌರವಾರ್ಪಣೆ ಮತ್ತು ಶ್ರೀ ದುಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.

