HEALTH TIPS

ಭಾರತ ಮಾತೃ ಪ್ರಧಾನ್ಯದಿಂದ ವಿಶ್ವ ಮಾನ್ಯತೆ : ಪೆÇ್ರಪೆಸರ್ ಎಂ ಚಂದ್ರಪ್ರಭಾ ಹೆಗ್ಡೆ

ಮಂಜೇಶ್ವರ: ದೇವಾಲಯಳ ಮೂಲಕ ಧಾರ್ಮಿಕ, ಆಧ್ಯಾತ್ಮಿಕ ಶಕ್ತಿ ವೃದ್ದಿಗೊಂಡು ಧನಾತ್ಮಕ ಪರಿಸರ, ಸದ್ಗುಣಗಳ ಮನೋಭಾವ ವೃದ್ದಿಯಾಗುತ್ತದೆ. ಕ್ಷೇತ್ರಗಳ ಪುನರುದ್ದಾರವು ಕರ್ತವ್ಯವಾಗಿದ್ದು, ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವದ ಮೂಲಕ ಸತ್ ಚಿಂತರನೆಗಳು ಮನೆಮಾಡಲಿ ಎಂದು ಒಡಿಯೂರು ಮಹಾಸಂಸ್ಥಾನದ ಸಾದ್ವಿ ಶ್ರೀಮತಾನಂದಮಯೀ ಅವರು ಆಶೀರ್ವಚನಗೈದು ಆಶಯ ವ್ಯಕ್ತಪಡಿಸಿದರು. ಮಂಜೇಶ್ವರ ಹೊಸಬೆಟ್ಟಿನ ಜಮ್ಮದ ಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ನಡೆಯುತ್ತಿರುವ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಅಪರಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಮಾತೃಸಂಗಮದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಿರ್ವ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ಎಂ.ಚಂದ್ರಪ್ರಭಾ ಹೆಗ್ಡೆ ಅವರು ಮಾತನಾಡಿ, ಭಾರತ ಮಾತೃ ಪ್ರಧಾನ ದೇಶವಾಗಿದ್ದು, ಇಡೀ ವಿಶ್ವಕ್ಕೆ ಗುರು ಸ್ಥಾನದಲ್ಲಿರುವ ಏಕೈಕ ದೇಶವಾಗಿದೆ. ಭಾರತದ ನಾರೀ ಶಕ್ತಿ ಸಂಸ್ಕೃತಿ ಸಂಸ್ಕಾರಗಳನ್ನು ನೀಡುವ ಪೂಜನೀಯ ಸ್ಥಾನದಲ್ಲಿರುವುದೇ ನಮ್ಮ ದೇಶದ ಹಿರಿಮೆ ಎಂದು ತಿಳಿಸಿದರು. ಮಹಿಳೆ ಇಂದು ಸ್ವಾಭಿಮಾನದಿಂದ ಬದುಕುತ್ತಿದ್ದಾಳೆ. ನಮ್ಮ ಧರ್ಮದಲ್ಲಿ ಪುರುಷರಷ್ಟೇ ಸ್ವಾತಂತ್ರವನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಆದರೆ ಆ ಸ್ವಾತಂತ್ರ ವನ್ನು ಸ್ವಚ್ಚಂಧತೆ ಎಂದು ತಿಳಿದು ದುರುಪಯೋಗಮಾಡುತ್ತಿರುವುದು ವಿಷಾಧನೀಯ ಎಂದರು. ಜೀವನದ ಕೇಂದ್ರ ಬಿಂದು ಧರ್ಮ ಮಾರ್ಗದ ಮೂಲಕ ಬದುಕನ್ನು ಪಾವನಗೊಳಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ,ಸಂಸ್ಕೃತಿಯನ್ನು ತಿಳಿಸುವ ಕಾರ್ಯವನ್ನು ತಾಯಂದಿರು ನಿರ್ವಹಿಸಬೇಕು ಎಂದರು. ಮಾತೃಸಂಗಮದ ಅಧ್ಯಕ್ಷತೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರಾಜ್ ಅಕಾಡೆಮಿ ಸ್ಕೂಲ್ ಗುರುಪುರ ಇದರ ನಿರ್ದೇಶಕಿ ಮಮತಾ ಯತೀರಾಜ್ ಶೆಟ್ಟಿ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.,ವಿಶ್ವಹಿಂದೂ ಪರಿಷತ್ ,ಮಾತೃಮಂಡಳಿ ಕಾಸರಗೋಡು ಜಿಲ್ಲಾಧ್ಯಕ್ಷೆ ಮೀರಾ ಆಳ್ವಾ, ಮಂಜೇಶ್ವರ ಗ್ರಾಮಪಂಚಾಯತಿ ಸದಸ್ಯರಾದ ಬೇಬಿಲತಾ ಯಾದವ ಬಡಾಜೆ, ವಾಣಿ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ವರಶ್ರೀ ಆಳ್ವ ಹಾಡಿದರು, ಮಮತಾ ಕುಲಾಲ್ ಸ್ವಾಗತಿಸಿ, ಕೃಪಾ ಆಳ್ವ ಕೊಂಡೆವೂರು ವಂದಿಸಿದರು. ಹರಿಣಾಕ್ಷಿ ದಾಮೋದರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries