ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟು ಸೆರಿದ 'ಚಡ್ಡಿ'!
0
ಮಾರ್ಚ್ 22, 2019
ಲಂಡನ್: ಭಾರತದಲ್ಲಿ ಬಳಕೆಯಾಗುವ ಚಡ್ಡಿ ಪದ ಈಗ ಆಕ್ಸ್ ಫರ್ಡ್ ನಿಘಂಟಿನಲ್ಲಿ ಸೇರ್ಪಡೆಯಾಗಿದೆ.
ಚಡ್ಡಿ ಪದಕ್ಕೆ ಆಕ್ಸ್ ಫರ್ಡ್ ನಿಘಂಟಿನಲ್ಲಿ ಒಳ ಉಡುಪು ಎಂಬ ಅರ್ಥವನ್ನು ನೀಡಲಾಗಿದೆ. ಭಾರತದಲ್ಲಿ ಬ್ರಿಟನ್ ಆಡಳಿತವಿದ್ದಾಗ ಹಲವು ಗೆಜೆಟ್ ಪ್ರಕಟಣೆಗಳಲ್ಲಿ ಸಾಕಷ್ಟು ಬಾರಿ ಉಲ್ಲೇಖಗೊಂಡಿತ್ತು.
1990ರ ದಶಕದ ಮಧ್ಯ ಭಾಗದಲ್ಲಿ ಬಿಬಿಸಿ ಟಿವಿಯಲ್ಲಿ ಪ್ರಸಾರವಾದ ಬ್ರಿಟೀಷ್-ಏಷ್ಯನ್ ಕಾಮಿಡಿ ಧಾರವಾಹಿ ಮೂಲಕ ಚಡ್ಡಿ ಎಂಬ ಪದ ಹೆಚ್ಚು ಪ್ರಚಲಿತಗೊಂಡಿತ್ತು. ಈ ಟಿವಿ ಧಾರವಾಹಿಯಲ್ಲಿ ಭಾಂಗ್ರಾ ಮಫಿನ್ಸ್ ಎಂಬ ಹಾಸ್ಯನಟರ ಪಾತ್ರದಲ್ಲಿ ನಟಿಸಿದ್ದ ಭಾರತದ ಸಂಜೀವ್ ಭಾಸ್ಕರ್ ತಮ್ಮ ಡೈಲಾಗ್ ಗಳಲ್ಲಿ ಕಿಸ್ ಮೈ ಚಡ್ಡೀಸ್ ಎಂಬ ವಾಕ್ಯದಿಂದ ಚಡ್ಡಿ ಪದ ಹೆಚ್ಚು ಪ್ರಚಲಿತಕ್ಕೆ ಬಂದಿತ್ತು.
ಆಕ್ಸ್‍ಫರ್ಡ್ ಇಂಗ್ಲಿಷ್ ಡಿಕ್ಷನರಿಯ ಹಿರಿಯ ಸಹಾಯಕ ಸಂಪಾದಕ ಜೋನಾಥನ್ ಡೆಂಟ್, ಹಾಫ್ ಪ್ಯಾಂಟ್, ಶಾಟ್ರ್ಸ್, ಒಳ ಉಡುಪುಗಳು ಎಂಬ ಅರ್ಥದಲ್ಲಿ ಭಾರತದಲ್ಲಿ ಬಳಕೆಯಾಗುವ ಚಡ್ಡಿ ಎಂಬ ಪದವನ್ನು ಬ್ರಿಟನ್ ನಲ್ಲಿ ಅಸಮ್ಮತಿ, ತಿರಸ್ಕಾರ ಅಥವಾ ಗೌರವಕ್ಕೆ ಅರ್ಹರಲ್ಲ ಎಂಬ ಸಂವಾದಿಯಾಗಿ ಬಳಸಲಾಗುತ್ತದೆ. ಈ ಎರಡೂ ಅರ್ಥದಲ್ಲಿ ಚಡ್ಡಿ ಎಂಬ ಪದವನ್ನು ಆಕ್ಸಫರ್ಡ್ ಇಂಗ್ಲಿಷ್ ಡಿಕ್ಷನರಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

