ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ-ದ್ರವ್ಯಕಲಶ ಮಹೋತ್ಸವ ಸಮಿತಿ ರೂಪೀಕರಣ ಸಭೆ
0
ಮಾರ್ಚ್ 24, 2019
ಮುಳ್ಳೇರಿಯ: ಮುಳಿಯಾರು ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಮೇ ತಿಂಗಳಿನಲ್ಲಿ ಜರಗಲಿರುವ ದ್ರವ್ಯಕಕಲಶ ಮಹೋತ್ಸವದ ಯಶಸ್ವಿಗಾಗಿ ಸಮಿತಿ ರೂಪೀಕರಣ ಸಭೆಯು ಇತ್ತೀಚೆಗೆ ಶ್ರೀಕ್ಷೇತ್ರದಲ್ಲಿ ಜರಗಿತು.
ಗೋವಿಂದ ಬಳ್ಳಮೂಲೆ ಅವರು ಪ್ರಾರ್ಥಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸೀತಾರಾಮ ಬಳ್ಳುಳ್ಳಾಯ ಅವರು ದ್ರವ್ಯಕಲಶದ ಕುರಿತಾಗಿ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ವೇಣುಗೋಪಾಲ ತತ್ವಮಸಿ ಅವರನ್ನು ಅಧ್ಯಕ್ಷರನ್ನಾಗಿಯೂ, ಗೋಪಾಲನ್ ಕೋಟೂರ್ ಅವರನ್ನು ಕಾರ್ಯದರ್ಶಿಯನ್ನಾಗಿಯೂ, ಸೀತಾರಾಮ ಬಳ್ಳುಳ್ಳಾಯರನ್ನು ಕೋಶಾಧಿಕಾರಿಯನ್ನಾಗಿಯೂ ಆಯ್ಕೆ ಮಾಡಿ ದ್ರವ್ಯಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು.
ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಗಳ ಮಾರ್ಗದರ್ಶನದಲ್ಲಿ ಮೇ. 23 ರಿಂದ 28 ರವರೆಗೆ ಶ್ರೀಕ್ಷೇತ್ರದಲ್ಲಿ ದ್ರವ್ಯಕಲಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

