ನಿರುದ್ಯೋಗ ವೇತನ ವಿತರಣೆ ಆರಂಭ
0
ಮಾರ್ಚ್ 24, 2019
ಉಪ್ಪಳ: ಮಂಗಲ್ಪಾಡಿ ಗ್ರಾಮಪಂಚಾಯತಿಯಲ್ಲಿ 2018 ಏಪ್ರಿಲ್ ತಿಂಗಳಿಂದ ನವೆಂಬರ್ ತಿಂಗಳರೆಗಿನ ನಿರುದ್ಯೋಗ ವೇತನ ವಿತರಣೆ ಪಂಚಾಯತಿ ಕಚೇರಿಯಲ್ಲಿ ಆರಂಭಗೊಂಡಿದ್ದು, ಮಾ.26 ವರೆಗೆ ನಡೆಯಲಿದೆ. ಫಲಾನುಭವಿಗಳು ಉದ್ಯೋಗ ವಿನಿಮಯಕೇಂದ್ರದ ನೋಂದಣಿ ಚೀಟಿ, ಗುರುತು ಚೀಟಿ, ಪಂಚಾಯತಿ ನೋಂದಣಿ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್, ಅರ್ಹತಾ ಪತ್ರಗಳು ಇತ್ಯಾದಿಗಳೊಂದಿಗೆ ಕಚೇರಿಗೆ ಹಾಜರಾಗಿ ವೇತನ ಪಡೆಯುವಂತೆ ಕಾರ್ಯದರ್ಶಿ ತಿಳಿಸಿರುವರು.

