HEALTH TIPS

ಬೆಚ್ಚಿ ಬೀಳಿಸಿದ ನಾಲ್ಕು ಕೋಟಿ-ಹುಟುಕಾಟದಲ್ಲಿ ಹೈರಾಣರಾದ ನಾಗರಿಕರು!

ಮುಳ್ಳೇರಿಯ: ಕೇರಳ ರಾಜ್ಯ ಲಾಟರಿಯ ಗುರುವಾರ ಪ್ರಕಟಗೊಂಡ ಸಮ್ಮರ್ ಬಂಪರ್ ಲಾಟರಿಯಲ್ಲಿ 4 ಕೋಟಿಯ ಪ್ರಥಮ ಬಹುಮಾನ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮುಳ್ಳೇರಿಯ ಪ್ರದೇಶ ವ್ಯಾಪ್ತಿಯಲ್ಲಿ ದೊರಕಿದ್ದು, ಟಿಕೆಟ್ ಪಡೆದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಗುರುವಾರ ಮಧ್ಯಾಹ್ನ ಪ್ರಕಟಗೊಂಡ ಸಮ್ಮರ್ ಬಂಪರ್ ಲಾಟರಿಯಲ್ಲಿ ಎಸ್‍ಬಿ 131399 ಸಂಖ್ಯೆಗೆ 4 ಕೋಟಿ ರೂ.ಗಳ ಪ್ರಥಮ ಬಹುಮಾನ ಪ್ರಕಟಗೊಂಡಿದೆ. ಆದರೆ ಈ ಲಾಟರಿ ಖರೀಧಿಸಿದ ಲಕ್ಕೀ ಮ್ಯಾನ್ ಯಾರೆಂದು ಗುರುವಾರ ರಾತ್ರಿಯ ವರೆಗೂ ಪತ್ತೆಯಾಗದೆ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರ ಭಾವಚಿತ್ರಗಳೊಂದಿಗೆ ಇವರಿಗೆ ಲಭ್ಯವಾಗಿದೆ ಎಂಬ ವದಂತಿಗಳಿದ್ದರೂ ನೈಜ ವ್ಯಕ್ತಿಯ ಹುಡುಕಾಟ ಮುಂದುವರಿದಿದೆ.ಈ ಮಧ್ಯೆ ಸುಳ್ಯ ಕೇಂದ್ರೀಕರಿಸಿದ ವ್ಯಕ್ತಿಯೋರ್ವರು ಈ ಲಾಟರಿ ಖರೀದಿಸಿರಬೇಕು ಎಂದು ಸಂಶಯಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries