HEALTH TIPS

ತಂತ್ರಜ್ಞಾನದಿಂದ ನೌಕರಿ ಹಾಗೂ ಕೌಟುಂಬಿಕ ಕೆಲಸಗಳಿಗೆ ಹೆಚ್ಚು ಅಡಚಣೆ!-ಅಧ್ಯಯನ ವರದಿ

ನವದೆಹಲಿ: ಬೆಳೆಯುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ ಉಂಟು ಮಾಡುತ್ತಿದೆ ಎಂದು ಭಾರತದ ಶೇ.33 ರಷ್ಟು ಯುವ ವೃತ್ತಿಪರರ ಅಭಿಪ್ರಾಯವಾಗಿದೆ ಎಂದು ಮಾನ್ ಸ್ಟರ್.ಕಾಮ್ ಹೇಳಿದೆ. ಮೀಟಿಂಗ್, ಕರೆಗಳು ಹಾಗೂ ತರಬೇತಿಗಳಿಂದ ಕಚೇರಿ ಅವಧಿ ಹಾಗೂ ಮೇಲ್ವಿಚಾರಕರ ನೆಗೆಟಿವ್ ವರ್ತನೆ ಸಮತೋಲಕರ ಜೀವನಕ್ಕೆ ಅಡ್ಡಿ ಉಂಟು ಮಾಡುತ್ತವೆ ಎಂದು ಭಾವಿಸಿದ್ದಾರೆ ಎಂದು ವರದಿ ಮಾಡಿದೆ. ತಂತ್ರಜ್ಞಾನದಿಂದ ತುಂಬಾ ಅನುಕೂಲವಾಗುತ್ತಿದೆ ಹೇಳಲಾಗಿತ್ತು ಆದರೆ ಮೊಬೈಲ್ ಲ್ಯಾಪ್ ಟಾಪ್ ಮುಂತಾದ ಆಧುನಿಕ ಉಪಕರಣಗಳಿಂದ ನೌಕರಿ ಹಾಗೂ ಕೌಟುಂಬಿಕ ಕೆಲಸಗಳನ್ನು ನಿರ್ವಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಸಮೀಕ್ಷೆ ಪ್ರಕಾರ, ಶೇ.,67 ರಷ್ಟು ವೃತ್ತಿನಿರತ ನೌಕರರು, ಕೆಲಸದ ಅವಧಿ ನಂತರವೂ, ನೌಕರಿ ಮುಗಿದ ನಂತರವೂ ತಮ್ಮ ಕೆಲಸದ ಬಗ್ಗೆಯೇ ಚಿಂತಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ, ತಮ್ಮ ಕೆಲಸದ ಹಿನ್ನೆಡೆಯಿಂದಾಗಿ ಅರ್ಧದಷ್ಟು ವೃತ್ತಿ ನಿರತ ಕೆಲಸಗಾರರು ತಮ್ಮ ಸಂಗಾತಿಗಳಿಗೆ ಸಮಯ ಕೊಡಲಾಗುತ್ತಿಲ್ಲ, ಈ ಸಂಬಂದ ತಮಗೆ ಪಶ್ಚಾತ್ತಾಪವಿದೆ ಎಂದು ಹೇಳಿದ್ದಾರೆಂದು ಸಮೀಕ್ಷೆ ತಿಳಿಸಿದೆ. 18ರಿಂದ 55 ವರ್ಷದೊಳಗಿನ 2ಸಾವಿರ ಕೆಲಸಗಾರರು ಸರ್ವೆಯಲ್ಲಿ ಭಾಗಿಯಾಗಿದ್ದರು ಎಂದು ಮಾನ್ ಸ್ಟರ್.ಕಾಮ್ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries