ಇಂದು ಕುಂಟಿಕಾನ ಮಠದಲ್ಲಿ ದುರ್ಗಾಪೂಜೆ
0
ಮಾರ್ಚ್ 25, 2019
ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಾ.26 ರಂದು ದುರ್ಗಾ ಪೂಜೆ ನಡೆಯಲಿದೆ.
ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 7 ರಿಂದ ಭಜನಾ ಸಂಕೀರ್ತನೆ, 8 ರಿಂದ ಭಾಗ್ಯ ಸೂಕ್ತ, ಶಾಂತ ದುರ್ಗಾ ಮಂತ್ರಗಳೊಂದಿಗೆ ದುರ್ಗಾ ಪೂಜೆ, ಸಾಮೂಹಿಕ ಪ್ರಾರ್ಥನೆ, 8.30 ರಿಂದ ಶ್ರೀ ಶಂಕರನಾರಾಯಣ ದೇವರಿಗೆ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ಸುಗೊಳಿಸುವಂತೆ ವಿನಂತಿಸಲಾಗಿದೆ.

