ಗುರುಬಲದಿಂದ ಸಾಧನೆ ಸಾಧ್ಯ-ಒಡಿಯೂರು ಶ್ರೀ
0
ಮಾರ್ಚ್ 20, 2019
ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆಯ ಪ್ರಥಮ ವಾರ್ಷಿಕೋತ್ಸವ
ಉಪ್ಪಳ: ಅನ್ಯೊನ್ಯವಾದ ಪ್ರೀತಿ,ವಿಶ್ವಾಸದಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ. ಸಂಸ್ಕಾರ,ಸಹಕಾರ,ಸಂಘಟನೆಯ ಮೂಲಕ ಸಮೃದ್ದಿಯ ಸಚ್ಚಾರಿತ್ರ್ಯ ನಿರ್ಮಾಣಕ್ಕೆ ಬುನಾದಿ. ಸಜ್ಜನರ ಸಂಘಟನೆಯಿಂದ ಸತ್ಕಾರ್ಯ ಮತ್ತು ಉತ್ತಮ ಸಮಾಜ ನೆಲೆಯಾಗುವುದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನಗೈದು ತಿಳಿಸಿದರು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೊಜನೆಯ ಬಾಯರು ಘಟಕದ ನೇತೃತ್ವದಲ್ಲಿ ಮುಳಿಗದ್ದೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಭಾನುವಾರ ನಡೆದ ಪ್ರಥಮ ವಾರ್ಷಿಕೋತ್ಸವ- ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷಣ ಕ್ಷಣವು ಪಡೆಯುವ ಶಿಕ್ಷಣದಲ್ಲಿ ನಿತ್ಯ ವಿಧ್ಯಾಥಿಯಾಗಿರುವವನೆ ನಿಜವಾದ ಶಿಕ್ಷಕ. ಧರ್ಮ ಎಂದರೆ ಒಳ್ಳೆಯ ಹೆಸರಿನಲ್ಲಿ ಬದುಕುವುದು. ಸಂಪತ್ತು ಗಳಿಕೆಯಾಗಲು, ಲೊಕ ಕಲ್ಯಾಣಕ್ಕೆ ಉಪಯೊಗಿಸುದಾಗಿದೆ. ಗುರು ಬಲದಿಂದ ಎಲ್ಲವನ್ನು ಗಳಿಸಬಹುದು ಎಂದು ಶುಭ ಹಾರ್ವೆಸಿದರು.
ಈ ಸಂದರ್ಭದಲ್ಲಿ ಬಾಯಾರು ಘಟಕದ ವಿಕಾಸವಾಣಿಯ 13 ಜನ ಸ್ವಯಂ ಸೇವಾತಂಡದ ಸದಸ್ಯರಿಗೆ ಪೂಜ್ಯ ಶ್ರೀ ಗಳು ಶಾಲು ಹೊದೆಸಿ ಮಂತ್ರಾಕ್ಷತೆ ನೀಡಿ ಹರಸಿದರು. ಸಾದ್ವಿ ಶ್ರೀಮಾತಾನಂದಮಯಿ ಅವರು ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಒಡಿಯೂರು ಶ್ರ್ರೀ ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ ಕಲ್ಲಗದ್ದೆ, ಮುಳಿಗದ್ದೆ ಶಾಲೆಯ ಮುಖ್ಯೊಪಾಧ್ಯಾಯ ಆದಿನಾರಾಯಣ ಭಟ್ ಯಂ, ಶಾಲಾ ಪ್ರಬಂಧಕ ರಾಜೇಶ್ ಭಟ್, ಟ್ರಸ್ಟನ ಸದಸ್ಯರಾದ ರಾಮಕೃಷ್ಣ
ಭಟ್,ಹಾಗು ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೈಗುರುದೇವ್ ಮಹಿಳಾ ಕುಣಿತ ಭಜನಾ ತಂಡ ಕನ್ಯಾನ ಇವರಿಂದ ಕುಣಿತ ಭಜನೆ,ಬಾಲ ಪ್ರತಿಭೆಗಳಿಂದ ನೃತ್ಯವೈವಿಧ್ಯ, ಯಜ್ನೆಶ್ ಆಚಾರ್ಯ ಬಾಯಾರು ಮತ್ತು ಬಳಗದವರಿಂದ ಭಕ್ತಿ ರಸಮಂಜರಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೊಜನೆಯ ಸೆವಾದೀಕ್ಷಿತರಾದ ರಾಧಾಕೃಷ್ಣ.ಕೆ ಇವರಿಂದ ಜಾದು ಪ್ರದರ್ಶನ ನಡೆಯಿತು. ಸುಂದರ ಬಾಯಾರು ಸ್ವಾಗತಿಸಿ,ಕುಮಾರಿ ಸ್ವರ್ಣಲತಾ ಪ್ರಾರ್ಥಿಸಿ,ವರದಿ ವಾಚಿಸಿದರು. ಭವ್ಯ ಶ್ರೀಧರ್
ವಂದಿಸಿದರು. ಸಂಯೊಜಕಿಯರಾದ ಲೀಲಾ.ಕೆ ನಿರೂಪಿಸಿ, ಸೆವಾದೀಕ್ಷಿತೆಯರಾದ ಶಶಿಕಲಾ ಹಾಗು ಗುಲಾಬಿ ಸಹಕರಿಸಿದರು.

