ಜಮ್ಮದ ಮನೆ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ವೈಭವೋಪೇತ ಚಾಲನೆ
0
ಮಾರ್ಚ್ 20, 2019
ಮಂಜೇಶ್ವರ: ಹೊಸಬೆಟ್ಟು ಜಮ್ಮದ ಮನೆ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಅಪರಾಹ್ನ 3.30ಕ್ಕೆ ಮಾಡ ಶ್ರೀಕ್ಷೇತ್ರದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಟು ಶ್ರೀಕ್ಷೇತ್ರಕ್ಕೆ ಆಗಮಿಸುವುದರೊಂದಿಗೆ ವೈಭವೋಪೇತ ಚಾಲನೆ ದೊರಕಿತು. ಸಂಜೆ 5ಕ್ಕೆ ವೈದಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಉದ್ಯಾವರ ಮಾಡ ಐಸ್ರಾಲ್ ಗುತ್ತು ಮಂಜು ಭಂಡಾರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಕಟೀಲ್ದಪ್ಪೆ ಶ್ರೀಉಳ್ಳಾಲ್ತಿ ನಾಟಕ ಪ್ರದರ್ಶನ ನಡೆಯಿತು.

