HEALTH TIPS

ರಾಜ್ಯದಲ್ಲಿ ಎನ್.ಡಿ.ಎ. ಸೀಟು ಹಂಚಿಕೆ ಪೂರ್ಣ-ಕಾಸರಗೋಡಿಗೆ ಅಭ್ಯರ್ಥಿಯಾಗಿ ರವೀಶ ತಂತ್ರಿ ಕುಂಟಾರು

ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಘಟಕದಲ್ಲಿ ಸೀಟು ಹಂಚಿಕೆ ದಿಲ್ಲಿಯಲ್ಲಿ ನಡೆದ ಮಾತುಕತೆಯಲ್ಲಿ ಪೂರ್ಣಗೊಂಡಿದೆ. ಇದರಂತೆ ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ 14 ರಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಘಟಕ ಪಕ್ಷವಾದ ಬಿಡಿಜೆಎಸ್ ಐದರಲ್ಲೂ, ಕೇರಳ ಕಾಂಗ್ರೆಸ್ ಒಂದರಲ್ಲೂ ಸ್ಪರ್ಧಿಸಲಿದೆ ಎಂದು ದಿಲ್ಲಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಖಿಲ ಭಾರತ ಕಾರ್ಯದರ್ಶಿ ಮುರಳೀಧರ ರಾವ್ ತಿಳಿಸಿದ್ದಾರೆ. ಇದರಂತೆ ತಿರುವನಂತಪುರ, ಆಟ್ಟಿಂಗಲ್, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಎರ್ನಾಕುಳಂ, ಚಾಲಕುಡಿ, ಪಾಲ್ಘಾಟ್, ಪೆÇನ್ನಾನಿ, ಮಲಪ್ಪುರಂ, ಕಲ್ಲಿಕೋಟೆ, ವಡಗರ, ಕಣ್ಣೂರು ಮತ್ತು ಕಾಸರಗೋಡು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಉಳಿದಂತೆ ತೃಶೂರು, ಮಾವೇಲಿಕ್ಕರ, ಇಡುಕ್ಕಿ, ಆಲತ್ತೂರು ಮತ್ತು ವಯನಾಡ್ ಕ್ಷೇತ್ರಗಳಲ್ಲಿ ಬಿಡಿಜೆಎಸ್‍ಗೆ ಬಿಟ್ಟುಕೊಡಲಾಗಿದೆ. ಕೋಟ್ಟಯಂ ಕ್ಷೇತ್ರದಲ್ಲಿ ಕೇರಳ ಕಾಂಗ್ರೆಸ್ ಮುಖಂಡ 2004 ರಲ್ಲಿ ಎನ್‍ಡಿಎ ಟಿಕೆಟ್‍ನಲ್ಲಿ ಮೂವಾಟುಪುಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಅಂದಿನ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಪಿ.ಸಿ.ಥೋಮಸ್ ಸ್ಪರ್ಧಿಸುವರು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರವೀಶ ತಂತ್ರಿ ಕುಂಟಾರು ಅವರನ್ನು ಘೋಶಿಸಲಾಗಿದೆ. ಕುಂಬಳೆ ಸೀಮೆಯ ಪ್ರಧಾನ ತಂತ್ರಿಮನೆತನಗಳಲ್ಲಿ ಒಂದಾಗಿರುವ ಕುಂಟಾರು ಮನೆತನಕ್ಕೆ ಸೃಇದ ರವೀಶ ತಂತ್ರಿಯವರು ದಿ. ಕುಂಟಾರು. ಸುಬ್ರಾಯ ತಂತ್ರಿವರ್ಯರ ಸುಪುತ್ರರಾಗಿ ಹಿಂದೂ ಪರ ಸಂಘಟನೆಗಳಲ್ಲಿ ಕಳೆದ 12 ವರ್ಷಕ್ಕಿಂತಲೂ ಮಿಕ್ಕಿದ ಕಾಲದಿಂದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಹಿಂದೂ ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವರು ಬಳಿಕ ಮಂಜೇಶ್ವರ ಮಂಡಲ ಬಿಜೆಪಿ ಪಕ್ಷದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದು, ಬಿಜೆಪಿ ರಾಜ್ಯ ಸಮಿತಿಯ ಕಾರ್ಯಕಾರೀ ಸಮಿತಿ ಸದಸ್ಯರಾಗಿದ್ದಾರೆ. ಪ್ರಬಲ ವಾಗ್ಮಿ: ತಮ್ಮ ಪ್ರಖರ ಮಾತು ಮತ್ತು ನೀಡಿದ ಮಾತಿನ ಪೂರೈಸುವಿಕೆಯಲ್ಲಿ ಪ್ರಾಮಾಣಿಕ ವ್ಯಕ್ತಿತ್ವದ ಮೂಲಕ ಕೇರಳ ಹಾಗೂ ಕರ್ನಾಟಕ ರಾಜ್ಯ ಎರಡರಲ್ಲೂ ಗುರುತಿಸಿಕೊಂಡಿದ್ದರು. ಧಾರ್ಮಿಕ ವೈದಿಕ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಅವರು, ಪರಂಪರಾಗತ ತಾಂತ್ರಿಕ ವಿಧಿವಿಧಾನಗಳನ್ನು ತನ್ನ ಹಿರಿಯ ಸಹೋದರ ಕುಂಟಾರು ವಾಸುದೇವ ತಂತ್ರಿಗಳೊಂದಿಗೆ ನಿರ್ವಹಿಸುತ್ತಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಾಲಯ, ಪೆರ್ಲದ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಾಲಯದ ಸಹಿತ ಹಲವು ದೇವಾಲಯಗಳ ಮುಖ್ಯ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಸುಜಾತಾ ಆರ್.ತಂತ್ರಿ ಕಾರಡ್ಕ ಗ್ರಾ.ಪಂ. ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದರು. ರವೀಶ ತಂತ್ರಿ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ(2016) ಕಾಸರಗೋಡು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಂದು ಯುಡಿಎಫ್ ಅಭ್ಯರ್ಥಿ ಎನ್ ಎ ನೆಲ್ಲಿಕುನ್ನು ಅವರು 64727 ಮತಗಳನ್ನೂ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರವೀಶ ತಂತ್ರಿ ಅವರು 56120 ಮತಗಳನ್ನು ಪಡೆದು 8607 ಮತಗಳಿಂದ ಪರಾಭವಗೊಂಡಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ, ಎಲ್‍ಡಿಎಫ್ ಅಭ್ಯರ್ಥಿ ಪಿ.ಕರುಣಾಕರನ್ ವಿರುದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಸ್ಪರ್ಧಿಸಿದ್ದರು, ಕರುಣಾಕರನ್ ಅವರು 384964 ಮತಗಳನ್ನೂ, ಸುರೇಂದ್ರನ್ ಅವರು 172826 ಮತಗಳನ್ನೂ ಪಡೆದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries