ಕಾಸರಗೋಡು: ಮೋಟಾರು ವಾಹನ ಇಲಾಖೆ ವ್ಯಾಪ್ತಿಯ ಎಲ್ಲ ಸೇವೆಗಳು ಮೇ1 ರಿಂದ ಕೇಂದ್ರ ಸರಕಾರದ "ವಾಹನ್", "ಸಾರಥಿ" ಎಂಬ ಆನ್ ಲೈನ್ ಸೌಲಭ್ಯ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಈಗಿರುವ ಸೌಲಭ್ಯಗಳಲ್ಲಿ ಆನ್ ಲೈನ್ ಶುಲ್ಕ ಪಾವತಿಸಿದ ಅರ್ಜಿದಾರರು ಆಯಾ ಕಚೇರಿಗಳನ್ನು ತಕ್ಷಣ ಸಂಪರ್ಕಿಸಬೇಕು.
2006 ರಿಂದ ಬಳಸಲಾಗುತ್ತಿರುವ ಸ್ಮಾರ್ಟ್ ಮೂವ್ ಸಾಫ್ಟ್ ವೇರ್ ನ ಬಳಕೆ ಏ.30ರಂದು ಸಮಾಪ್ತಿಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲನೆ ಪರವಾನಗಿ ಸಹಿತ ಸೇವೆಗಳ ಸಂಬಂಧ ಅರ್ಜಿಗಳ ವಿಲೇವಾರಿ ಏ.30ರಂದು ಪೂರ್ಣಗೊಳ್ಳಬೇಕಿದೆ.
ಜಾರಿ ಸೌಲಭ್ಯ ಮೂಲಕ ಲನಿರ್ಂಗ್ ಪರವಾನಗಿ ಪಡೆದಿದ್ದು, ವಹನ ಚಾಲನೆ ಪರೀಕ್ಷೆಗೆ ಹಾಜರಾಗದೇ ಇರುವವರು ತಾತ್ಕಾಲಿಕ ನೋಂದಣಿ ಪಡೆದು ಶಾಶ್ವತ ನೋಂದಣಿ ಹಾಜರುಪಡಿಸದೇ ಇರುವವರು ತಕ್ಷಣ ಕಚೇರಿಯನ್ನು ಸಂಪರ್ಕಿಸಬೇಕು. ಮೇ 1ರಿಂದ ಹಲೆ ಸೌಲಭ್ಯಗಳ ಮೂಲಕ ಯಾವುದೇ ಸೌಲಭ್ಯ ಲಭಿಸದು.


