ಕಾಸರಗೋಡು: ಆರ್ಥಿಕ ವಲಯದಲ್ಲಿ ಸ್ಟಾರ್ಟ್ ಅಪ್ ಗಳಿಗೆ ಅಪಾರ ಸಾಧ್ಯತೆಗಳಿವೆ. ಅವಕಾಶಗಳನ್ನು ಸಮರ್ಪಕವಾಗಿ ಬಳಸಿದರೆ ಅದು ಯಶಸ್ಸಿಗೆ ಸೋಪಾನ ಎಂದು ಸಿಬಿಲ್ ಸಂಸ್ಥೆಯ ಅಧ್ಯಕ್ಷ ಎಂ.ವಿ.ನಾಯರ್ ಅಭಿಪ್ರಾಯಪಟ್ಟರು.
ಕೇರಳ ಸ್ಟಾರ್ಟ್ ಅಪ್ ಮಿಷನ್, ಜಿಲ್ಲೆಯ ಉದ್ದಿಮೆದಾರರು, ಉದ್ದಿಮೆದಾರರ ಒಕ್ಕೂಟಗಳು, ಅಕಾಡೆಮಿಕ್ ಪರಿಣತರು, ಸಂಶೋದನೆ ಸಂಸ್ಥೆಗಳ ಪ್ರತಿನಿಧಿಗಳು ಮೊದಲಾದವರನ್ನು ಅಳವಡಿಸಿ ನಡೆಸಿದ ಮಲಬಾರ್ ರೌಂಡ್ ಟೇಬಲ್ ಕಾಸರಗೋಡು ಎಡಿಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯೂನಿಯನ್ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿರುವ ಅವರು ಕಾಸರಗೋಡು ನಿವಾಸಿಯಾಗಿದ್ದಾರೆ. ಕಾಸರಗೋಡಿನಲ್ಲಿರುವ ಉದ್ದಿಮೆ ಸಂಸ್ಕೃತಿಯ ಅಭಿವೃದ್ಧಿಗೆ ಇಂಥಾ ಕಾರ್ಯಕ್ರಮಗಳು ಪೂರಕ ಎಂದವರು ತಿಳಿಸಿದರು.
ಸಮಾರಮಭದಲ್ಲಿ ಬ್ಯಾಂಕಿಂಗ್, ಸಿಬಿಲ್ ಫಂಡಿಂಗ್ ಎಂಬ ವಿಷಯಗಳ ಕುರಿತು ಸಂವಾದ ನಡೆಯಿತು. ನೋರ್ತ್ ಮಲಬಾರ್ ಛೇಂಬರ್ ಆಫ್ ಕಾಮರ್ಸ್, ಜೆ.ಸಿ.ಐ, ಕಾಸರಗೋಡು ಕಮ್ಯೂನಿಟಿ ಇತ್ಯಾದಿ ಸಂಸ್ಥೆಗಳ ಪ್ರತಿನಿಧಿಗಳಾದ 20 ಮಂದಿ ಭಾಗವಹಿಸಿದ್ದರು.

