HEALTH TIPS

'ಜಿಯೋ ನ್ಯೂಸ್' ಮೂಲಕ ಆನ್ ಲೈನ್ ಸುದ್ದಿ ಲೋಕಕ್ಕೆ ರಿಲಯನ್ಸ್ ಎಂಟ್ರಿ!

   
       ಮುಂಬೈ: ಜಿಯೋ ಮಾರುಕಟ್ಟೆಗೆ ಹೊಸದಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್-ಆಧಾರಿತ ಸೇವೆ ರೂಪದಲ್ಲಿ ಜಿಯೋ ನ್ಯೂಸ್ ಎಂಬ ಡಿಜಿಟಲ್ ಉತ್ಪನ್ನವನ್ನು ಪರಿಚಯಿಸಿದೆ. ಈ ಆಪ್ ಅನ್ನು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
     ಜಿಯೋ ನ್ಯೂಸ್ ಉತ್ತಮ ಸಂದರ್ಭದಲ್ಲಿಯೇ ಲಾಂಚ್ ಆಗಿದ್ದು, ಭಾರತೀಯರಿಗೆ 2019ರ ಲೋಕಸಭಾ ಚುನಾವಣೆಯ ಬಗ್ಗೆ, ಐಪಿಎಲ್ 2019, ಕ್ರಿಕೆಟ್ ವಿಶ್ವಕಪ್ 2019ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಇದಲ್ಲದೇ ಭಾರತ ಮತ್ತು ವಿಶ್ವದಾದ್ಯಂತದ ನಡೆಯುವ ಪ್ರಮುಖ ಘಟನೆಗಳನ್ನು ಈ ಆಪ್ ಮೂಲಕವೇ ತಿಳಿದುಕೊಳ್ಳಲು ಅವಕಾಶ ನೀಡಲಿದೆ. ಈ ಆಪ್ ಬಳಸುವವರು ಇತ್ತೀಚಿನ ಸುದ್ದಿಗಳನ್ನು ಪಡೆಯುವುದಲ್ಲದೇ. ಬ್ರೇಕಿಂಗ್ ನ್ಯೂಸ್, ಲೈವ್ ಟಿವಿ, ವೀಡಿಯೊಗಳನ್ನು, ನಿಯತಕಾಲಿಕೆಗಳನ್ನು, ಪತ್ರಿಕೆಗಳನ್ನು ಓದುವುದು ಮತ್ತು ಇನ್ನು ಹೆಚ್ಚಿನ ಸೇವೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಒಂದೇ ಆಪ್‍ನಲ್ಲಿ ಸರ್ವವೂ ದೊರೆಯಲಿದೆ.
    ಜಿಯೋ ನ್ಯೂಸ್ 12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ತನ್ನ ಬಳಕೆದಾರರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿಯನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ತಮ್ಮ ಭಾಷೆಯಲ್ಲಿಯೇ ಆದ್ಯತೆಗಳನ್ನು ಆರಿಸುವ ಮೂಲಕ ಅವರ ಓದುವ ಅನುಭವವನ್ನು ವೈಯಕ್ತೀಕರಿಸಲು ಮುಂದಾಗಿದೆ. ಜಿಯೋ ನ್ಯೂಸ್ ಆಪ್ ನಲ್ಲಿ ಭಾರತ ಮತ್ತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 150+ ಲೈವ್ ನ್ಯೂಸ್ ಚಾನಲ್ಗಳು, 800+ ಮ್ಯಾಗಜೀನ್ಗಳು, 250+ ಸುದ್ದಿಪತ್ರಿಕೆಗಳು, ಪ್ರಸಿದ್ಧ ಬ್ಲಾಗ್ಗಳು ಮತ್ತು ಸುದ್ದಿ ವೆಬ್‍ಸೈಟ್‍ಗಳನ್ನು ಕಾಣಬಹುದಾಗಿದೆ.
     ಜಿಯೋ ನ್ಯೂಸ್ ಆಪ್ ಜಿಯೋ ಎಕ್ಸ್‍ಪ್ರೆಸ್  ನ್ಯೂಸ್, ಜಿಯೋ  ಮ್ಯಾಗ್ಸ್ ಮತ್ತು ಜಿಯೋ ನ್ಯೂಸ್ ಪೇಪರ್ಸ್ ಆಪ್‍ಗಳನ್ನು ಒಳಗೊಂಡ ಸೇವೆಯಾಗಲಿದ್ದು, ಇದರಲ್ಲಿ ಹೆಚ್ಚುವರಿಯಾಗಿ ಲೈವ್ ಟಿವಿ ಮತ್ತು ವೀಡಿಯೋಗಳು ಕೊಡುಗೆಯಾಗಿ ದೊರೆಯಲಿದೆ.  ಈಗಾಗಲೇ ಈ ಮೂರು ಆಪ್‍ಗಳನ್ನು ಬಳಕೆ ಮಾಡುತ್ತಿರುವವರು ಬಳಕೆದಾರರು ಜಿಯೋ ನ್ಯೂಸ್ ಆಪ್‍ಗೆ ಸೇರ್ಪಡೆಯಾಗಲಿದ್ದಾರೆ. ಇದಲ್ಲದೇ ಜಿಯೋ ಬಳಕೆದಾರರಲ್ಲದವರಿಗೂ ಪ್ರೀಮಿಯಮ್ ಆಯ್ಕೆಯ ಮೂಲಕ ಜಿಯೋ ನ್ಯೂಸ್ ಆಪ್ ಬಳಕೆಗೆ ಅವಕಾಶವನ್ನು ಮಾಡಿಕೊಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries