ಮಂಜೇಶ್ವರ: 2018-19 ನೇ ಸಾಲಿನ ಮಾರ್ಚ್ ನಲ್ಲಿ ಕೇರಳ ಸರಕಾರ ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ ಬಾಕ್ರಬೈಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಶ್ರಾವ್ಯ. ಬಿ ಹಾಗೂ ವೈಶಾಲಿ.ಯನ್ ಇವರು ಯು.ಎಸ್.ಎಸ್ ಸ್ಕಾಲರ್‍ಶಿಪ್‍ಗೆ ಅರ್ಹತೆಯನ್ನು ಪಡೆದಿರುತ್ತಾರೆ. ಶಾಲಾ ರಕ್ಷಕ-ಶಿಕ್ಷಕ ವೃಂದ ವಿಜೇತರನ್ನು ಅಭಿನಂಧಿಸಿದೆ.