ಪೆರ್ಲ: ಕವಿಹೃದಯದ ಸವಿಮಿತ್ರರು ವೇದಿಕೆ ಕಾಸರಗೋಡು ನೇತೃತ್ವದಲ್ಲಿ ಮುಂಗಾರ ಕಥಾಗೋಷ್ಠಿ ಸಾಹಿತ್ತಿಕ ಕಾರ್ಯಕ್ರಮ ಜೂ.30 ರಂದು ಕವಿ, ಲೇಖಕ ಹರೀಶ ಪೆರ್ಲ ಅವರ ಸ್ವಗೃಹ ಗುಲಾಬಿಯಲ್ಲಿ ಅಪರಾಹ್ನ 2 ರಿಂದ ನಡೆಯಲಿದೆ.
ಹರೀಶ ಪೆರ್ಲ ಅವರು ಅಧ್ಯಕ್ಷತೆ ವಹಿಸುವ ಸಮಾರಂಭವನ್ನು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉದ್ಘಾಟಿಸುವರು.ಕವಿ ಶ್ರೀಕೃಷ್ಣಯ್ಯ ಅನಂತಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಎನ್.ಬೋಳಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ಬಳಿಕ ನಡೆಯುವ ಕಥಾಗೋಷ್ಠಿಯಲ್ಲಿ ಜಿಲ್ಲೆಯ ಉದಯೋನ್ಮುಖ ಕಥನಕಾರರು ಭಾಗವಹಿಸುವರು. ಹೆಚ್ಚಿನ ಮಾಹಿತಿಗೆ ಶುಭಾಸ್ ಪೆರ್ಲ: 9447955721 ಸಂಖ್ಯೆ ಸಂಪರ್ಕಿಸಬಹುದು.

