ಕಾಸರಗೋಡು: ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ರಾಜ್ಯದಲ್ಲಿ ನಡೆಸುವ ಅಹವಾಲು ಸ್ವೀಕಾರ ಸಭೆಗಳ ಅಂಗವಾಗಿ ಜಿಲ್ಲೆಯಲ್ಲಿ ಸಿದ್ಧತೆ ನಡೆಯುತ್ತಿದೆ.
ಕಾಸರಗೋಡು, ಕಣ್ಣೂರು, ಕೋಯಿಕೋಡ್, ವಯನಾಡ್ ಜಿಲ್ಲೆಗಳಿಗಾಗಿ ಜುಲೈ 12ರಂದು ವಯನಾಡ್ ಸಿವಿಲ್ ಸ್ಟೇಷನ್ ನಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಹವಾಲು ಸ್ವೀಕಾರ ಸಭೆ ನಡೆಯಲಿದೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸಭೆ ಜರುಗಿತು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕರಿಂದಲೂ ದೂರು ಸ್ವೀಕರಿಸಲಿದ್ದು, ಮುಂದಿನ ಚಟುವಟಿಕೆಗಳಕುರಿತು ಚರ್ಚೆ ನಡೆಸುವ ಸಂಬಂಧ ಈ ಸಭೆ ನಡೆಯಿತು. ಉಲ್ಲಂಘಿಸಲಾಗುತ್ತಿರುವ ಮಕ್ಕಳ ಹಕ್ಕು ಗಳ ಸಂರಕ್ಷಣೆ ಕುರಿತು ಈ ಅಹವಾಲು ಸ್ವೀಕಾರ ಸಭೆ ನಡೆಯಲಿದೆ. ಮಕ್ಕಲ ಹಕ್ಕುಗಳಿಗೆ ಸಂಬಂಧಿಸಿ ವಿವಿಧ ಇಲಾಖೆಗಳಲ್ಲಿ ತೀರ್ಪು ಲಭಿಸದೇ ಇರುವ ಪ್ರಕರಣಗಳಿಗೆ ಸಂಬಂಧಿಸಿ ದೂರುಗಳನ್ನು ಸ್ವೀಕರಿಸಲಾಗುವುದು. ಆಸಕ್ತ ಮಕ್ಕಳೂ ದೂರು ಸಲ್ಲಿಸುವುದಿದ್ದರೆ ಸಂಬಂಧಟ್ಟವರು ಅದಕ್ಕೆ ಅವಕಾಶ ನೀಡಲಿದ್ದಾರೆ.
ಜಿಲ್ಲೆಯಿಂದ ಕಾರ್ಮಿಕ ಅಧಿಕಾರಿ, ಶಿಕ್ಷಣ ಉಪನಿರ್ದೇಶಕ, ಐ.ಸಿ.ಡಿಎಸ್., ಚೈಲ್ಡ್ ಲೈನ್, ಚೈಲ್ಡ್ ವೆಲ್ಫೇರ್ ಸಮಿತಿ, ಪೊಲೀಸ್ ಪ್ರತಿನಿಧಿಗಳು ಮೊದಲಾದವರು ಅಹವಾಲು ಸ್ವೀಕಾರ ಸಭೆಯಲ್ಲಿ ಭಾಗವಹಿಸಿದ್ದರು. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ನೋಟೀಸುಗಳು ಕನ್ನಡದಲ್ಲಿ ಮತ್ತು ಮಲೆಯಾಲಂನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಲಗತ್ತಿಸಲಾಗುವುದು. ಕಲ್ಪಟ್ಟ ಸಿವಿಲ್ ಸ್ಟೇಷನ್ ನ ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಜು.12ರಂದು ಬೆಳಗ್ಗೆ 10 ಗಂಟೆಗೆ ಅಹವಾಲು ಸ್ವೀಕಾರ ಸಭೆ ಜರುಗಿದೆ. ಮಕ್ಕಲ ಹಕ್ಕು ಕಾಯಿದೆ ಪ್ರಕಾರ ರಾಷ್ಟ್ರೀಯ ಮಟ್ಟದಲ್ಲಿಮಕ್ಕಳ ಹಕ್ಕು ಸಂರಕ್ಷಣೆಗೆ ಮಕ್ಕಳ ಹಕ್ಕು ಆಯೋಗ ರಚಿಸಲಾಗಿದೆ. ರಾಜ್ಯದಲ್ಲಿ ವಯನಾಡಿನಲ್ಲಿ 4 ಕೇಂದ್ರಗಳಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು, ಡಿ.ವೈಎಸ್.ಪಿ.(ಕ್ರೈಂ ಬ್ರಾಂಚ್) ಪ್ರದೀಪ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಎ.ಷಾಜು, ಡೆಪ್ಯೂಟಿ ಡಿ.ಎಂ.ಒ.ಡಾ.ಷಾಂಟಿ, ಡಿ.ಎಲ್.ಎಸ್.ಎ.ವಿಭಾಗ ಅಧಿಕಾರಿ ದಿನೇಶ, ಐ.ಸಿ.ಡಿ.ಎಸ್. ಪರೋಗ್ರಾಂ
ಸಂಚಾಲಕಿ ಕವಿತಾ ರಾಣಿ, ಚೈಲ್ಡ್ ಲೈನ್ ನೋಡೆಲ್ ಅಧಿಕಾರಿ ಅನೀಷ್ ಜೋಸ್, ವಿವಿಧ ಇಲಾಖೆ ಸಿಬ್ಬಂದಿ, ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


