HEALTH TIPS

ವಿಶೇಷ ವರದಿ: ಪಡಿತರ ಆದ್ಯತೆ ಕಾರ್ಡ್ : ಅನರ್ಹರ ವಿರುದ್ಧ ಕ್ರಮ- 318 ಮಂದಿ ಅನರ್ಹರ ಪತ್ತೆ: ದಂಡ ವಸೂಲಿ


        ಕಾಸರಗೋಡು:  ಜಿಲ್ಲೆಯಲ್ಲಿ ಅನರ್ಹರಾದ ಆದ್ಯತಾ ಪಟ್ಟಿಯಲ್ಲಿ, ಎ.ಎ.ವೈ. ಪಡಿತರ ಚೀಟಿ ಇರಿಸಿಕೊಂಡಿರುವವರನ್ನು ಪತ್ತೆಮಾಡುವ ತಪಾಸಣೆ ಮುಂದಿನ ದಿನಗಳಲ್ಲಿ ಕಠಿಣ ರೂಪದಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ನಾಗರೀಕ ಪೂರೈಕೆ ಅಧಿಕಾರಿ ವಿಶೇಷ ಸಂದರ್ಶನದಲ್ಲಿ ತಿಳಿಸಿರುವರು.
      ಕಳೆದ ಮೇ 6 ರಂದು ಆರಂಭಿಸಿದ್ದ ತನಿಖೆಯಲ್ಲಿ ಈ ವರೆಗೆ ಜಿಲ್ಲೆಯಲ್ಲಿ ಅನರ್ಹರಾದ 318 ಕಾರ್ಡ್ ದಾರರ ಪತ್ತೆಯಾಗಿತ್ತು. ಈ ವರೆಗೆ ಅವರು ಈ ಕಾರ್ಡ್ ಬಳಸಿ ಪಡೆದ ಪಡಿತರ ಸಾಮಾಗ್ರಿಗಳ ಮೌಲ್ಯ ರೂಪದಲ್ಲಿ ಕಿಲೋಗೆ 29.81 ರೂ.ನಂತೆ ದಂಡ ಪಡೆಯುವ ಕ್ರಮ ಆರಂಭಿಸಲಾಗಿದೆ ಎಂದವರು ನುಡಿದರು.
     ಅನರ್ಹರಾದ ಅನೇಕ ಮಂದಿ ಆದ್ಯತೆ ಪಟ್ಟಿ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೂ, ಜಿಲ್ಲೆಗೆ ಮಂಜೂರು ಮಾಡಿರುವ ಆದ್ಯತೆ ಕಾರ್ಡ್ ಗಳ ಸಂಖ್ಯೆಯ ಮಿತಿ ತಲಪಿರುವ ಹಿನ್ನೆಲೆಯಲ್ಲಿ ಆದ್ಯತೆ ಕಾರ್ಡ್ ಗಳನ್ನು ನೀಡಲು ಸಧ್ಯವಾಗದು. ಅನರ್ಹರು ಸ್ವ ಪ್ರೇರಣೆಯಿಂದ ಆದ್ಯತೆ ರಹಿತ ಕಾರ್ಡ್ ದಾರರ ಪಟ್ಟಿಗೆ ಅರ್ಜಿ ಸಲ್ಲಿಸಿದರೆ, ಅರ್ಹರಿಗೆ ಆದ್ಯತೆ ಕಾರ್ಡ್ ನೀಡಿಕೆ ಸಾಧ್ಯ.
       ಈಗಾಗಲೇ ಅನರ್ಹರು ಇರಿಸಿಕೊಂಡಿರುವ ಆದ್ಯತೆ ಕಾರ್ಡ್ ಗಳನ್ನು ನಾಗರೀಕ ಪೂರೈಕೆ ಅಧಿಕಾರಿಗೆ ಸಲ್ಲಿಸಿದಲ್ಲಿ ಶಿಕ್ಷ ಕ್ರಮಗಳಿಂದ ಹೊರತುಗೊಳ್ಳಬಹುದಾಗಿದೆ. ಆದರೆ ಅನೇಕ ಮಂದಿಗೆ ಸೂಚನೆ ನೀಡಿಯೂ ಕಾರ್ಡ್ ಹಿಂದಿರುಗಿಸಿಲ್ಲ. ಈ ನಿಟಿನಲ್ಲಿ ಜಿಲ್ಲಾ, ತಾಲೂಕು ಮಟ್ಟದ ನಾಗರೀಕ ಪೂರೈಕೆ ಅಧಿಕಾರಿಗಳ ನೇತೃತ್ವದಲ್ಲಿ ಪಡಿತರ ಇನ್ಸ್ ಪೆಕ್ಟರರು ಸೇರಿರುವ ತಂಡ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸುತ್ತಿದೆ. ಈ ರೀತಿ ಪತ್ತೆಯಾಗುವ ಆರೋಪಿಗಳಿಗೆ ದಂಡ ಹೇರಲಾಗುವುದು.
     ನಾಗರೀಕ ಪೂರೈಕೆ ನಿರ್ದೇಶಕರಿಂದ ಲಭಿಸಿದ ಮೂರು ತಿಂಗಳಿಗಿಂತ ಅಧಿಕ ಪಡಿತರ ಸಾಮಾಗ್ರಿ ಖರೀದಿಸದೇ ಇರುವ ಆದ್ಯತೆ ಕಾರ್ಡ್ ದಾರರು, 65 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿ ಮಾತ್ರ ಇರುವ ಕಾರ್ಡ್ ಗಳು, ಒಬ್ಬರು ಮಾತ್ರ ಇರುವ ಕಾರ್ಡ್ ಗಳು ಇತ್ಯಾದಿಗಳ ಪರಿಶೀಲನೆ ನಡೆಯುತ್ತಿದೆ. ಪಟ್ಟಿ ಪ್ರಕಾರ ಅನರ್ಹರಾದ 371 ಕಾರ್ಡ್ ಗಳನನು ಈಗಾಗಲೇ ರದ್ದು ಪಡಿಸಲಾಗಿದೆ. ಆನಿವಾಸಿ ಭಾರತೀಯ ಎಂಬವಿಚಾರವನ್ನು ಬಚ್ಚಿಟ್ಟು, ಮೃತರಾದವರ ಹೆಸರು ಹಾಗೇ ಇರಿಸಿ, ಆದ್ಯತಾ ಪಟ್ಟಿಯಲ್ಲಿದ್ದು, ಈಗ ವಿಳಾಸ ಬದಲಿಸಿರುವ ಮಂದಿಯ ಹೆಸರಲ್ಲಿ ಪಡಿತರ ಸಾಮಾಗ್ರಿಗಳನ್ನು ಪಡೆಯುತ್ತಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿದೆ. ಇವರು ಅಕ್ಷಯ ಕೇಂದ್ರ ಮೂಲಕ ಅರ್ಜಿ ಸಲ್ಲಿಸಬೇಕು. ಪರಿಶೀಲನೆಯಲ್ಲಿ ಲೋಪ ಪತ್ತೆಯಾದರೆ ಕ್ರಮ ಕೈಗೊಳ್ಳಲಾಗುವುದು.
     ಪಡಿತರ ಚೀಟಿಗಳಲ್ಲಿ ಆದಾರ್ ನಂಬ್ರ ಅಳವಡಿಸದೇ ಇರುವವರು ಅಕ್ಷಯ ಕೇಂದ್ರಗಳಮೂಲಕ , ನಾಗರೀಕ ಪೂರೈಕೆ ಕೇಂದ್ರಗಳ ಮೂಲಕ ಸೇರ್ಪಡೆ ಸಾಧ್ಯ. ಎರಡು ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳು ತುರ್ತಾಗಿ ಒಂದರಲ್ಲಿ ಹೆಸರು ತೆರವುಗೊಳಿಸಬೇಕು. ಈ ಸಂಬಂಧ ದೂರುಗಳಿದ್ದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ತಿಳಿಸಬೇಕು.
      ನಾಗರೀಕ ಪೂರೈಕೆ ಕಚೇರಿಗಳು, ಕಾಸರಗೋಡು: 9188527412., ಮಂಜೇಶ್ವರ: 9188527415., ಹೊಸದುರ್ಗ: 9188527413., ವೆಳ್ಳರಿಕುಂಡ್: 9188527414.
ಆದ್ಯತೆ/ ಎ.ಎ.ವೈ.ಕಾರ್ಡ್ ಗೆ ಅನರ್ಹರಾದವರು ಈ ಕೆಳಗಿನವರು: 
ಸರಕಾರಿ/ಅರೆ ಸರಕಾರಿ ಸಿಬ್ಬಂದಿ, ಸಾರ್ವಜನಿಕ ಸಂಸ್ಥೆಗಳ ಸಿಬ್ಬಂದಿ, ಸಹಕಾರಿ ಸಂಸ್ಥೆಗಳ ಸಿಬ್ಬಂದಿ, ಸೇವಾ ಪಿಂಚಣಿದಾರರು,ಆದಾಯ ತೆರಿಗೆದಾರರು, ಪ್ರತ ತಿಂಗಳ ಆದಾಯ 25 ಸಾವಿರಕ್ಕಿಂತ ಅಧಿಕವಾಗಿರುವವರು, ವಿದೇಶಗಳಲ್ಲಿ ದುಡಿಯುತ್ತಿರುವವರು, ಸ್ವಂತವಾಗಿಒಂದು ಎಕ್ರೆಗಿಂತ ಅಧಿಕ ಜಾಗ ಹೊಂದಿರುವವರು(ಪರಿಶಿಷ್ಟ ಪಂಗಡದವರ ಹೊರತಾಗಿ), ಸ್ವಂತವಾಗಿ ಒಂದು ಸಾವಿರ ಚ.ಅಡಿ ವಿಸ್ತೀರ್ಣದ ಮನೆ, ಫ್ಲಾಟ್ ಹೊಂದಿರುವವರು, ನಾಲ್ಕು ಚಕ್ರ ವಾಹನಹೊಂದಿರುವವರು(ಬದುಕಿಗಾಗಿ ಟ್ಯಾಕ್ಸಿ ಚಲಾಯಿಸುವವರ ಹೊರತಾಗಿ), ಕುಟುಂಬದ ಸದಸ್ಯರಲ್ಲಿ ಯಾರಾದರೂ ಒಬ್ಬರ ಆದಾಯ ತಿಂಗಳಿಗೆ 25 ಸಾವಿರ ರೂ.ಗಿಂತ ಅಧಿಕ ಉಳ್ಳವರು ಆಗಿರುತ್ತಾರೆ.
           

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries