ಕಾಸರಗೋಡು: ಕಾಸರಗೋಡು ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿ ಜೂ.27ರಂದು ಬೆಳಗ್ಗೆ 10.30ಕ್ಕೆ ಖಾಸಗಿ ವಲಯದ 33 ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
ಪದವಿ ಮತ್ತು ಎರಡು ವರ್ಷದ ವೃತ್ತಿ ಪರಿಚಯ ಹೊಂದಿರುವ 30 ವರ್ಷಕ್ಕಿಂತ ಕೆಳಗಿನ ವಯೋಮಾದವರಿಗಾಗಿ ಮೆನೆಜರ್ ರ 4 ಹುದ್ದೆಗಳಿಎ. ಪ್ಲಸ್-ಟು ಶಿಕ್ಷಣಾರ್ಹತೆಯಿರುವ 30 ವರ್ಷಕ್ಕಿಂತ ಕೆಳಗಿನ ವಯೋಮಾನದವರಿಗೆ ಮೆನೆಜರ್ ಟ್ರೈನಿಯ 5 ಹುದ್ದೆಗಳು ಬರಿಗಾಗಿವೆ. ಪ್ಲಸ್-ಟು/ ಪದವಿ ಹೊಂದಿದ್ದು, ಎರಡು ವರ್ಷದ ವೃತ್ತಿ ಪರಿಚಯ ಇರುವ ಪುರುಷರಿಗೆ ಸೇಲ್ಸ್ ಮೆನೆಜರ್ ಟ್ರೈನಿ ಹುದ್ದೆ, ಪ್ಲಸ್-ಟು/ಪದವಿ, 5 ವರ್ಷ ವೃತ್ತಿ ಪರಿಚಯ ಹೊಂದಿರುವ ಪುರುಷರಿಗೆ ಆಟೋಮೊಬೈಲ್ ಸೇಲ್ಸ್ ವಲಯದಲ್ಲಿ ಟೀಂ ಲೀಡರ್ ಹುದ್ದೆ, 20 ಹುದ್ದೆಗಳಿರುವ ಸೇಲ್ಸ್ ಆಫೀಸರ್ ಟ್ರೈನಿ, 4 ಹುದ್ದೆಗಳು ಬರಿದಾಗಿರುವ ಟೀಂ ಲೀಡರ್ ಹುದ್ದೆಗಳಿದ್ದು, 25-35 ವರ್ಷ ಪ್ರಾಯದವರಾಗಿರಬೇಕು. ಸೇಲ್ಸ್ ಆಫೀಸರ್ ಹುದ್ದೆಗೆ ಈಗ ತರಬೇತಿ ಪೂರ್ತಿಗೊಳಿಸಿದವರು ಅರ್ಜಿ ಸಲ್ಲಿಸಬಹುದು.
ಉದ್ಯೋಗ ಶೀಲತಾ ಕೇಂದ್ರದಲ್ಲಿ ಆಜೀವ ನೋಂದಣಿ ಹೊಂದಿರುವವರು ನೇರವಾಗಿ ಸಂದರ್ಶನದಲ್ಲಿ ಹಾಜರಾಗಬಹುದು. ನೋಂದಣಿ ನಡೆಸದೇ ಇದ್ದವರು ಸಂಬಂಧ ಪಟ್ಟ ದಾಖಲೆಗಳ, ಗುರುತುಚೀಟಿ ಸಹಿತ 250ರೂ. ನೋಂದಣಿ ಶುಲ್ಕ ಪಾವತಿಸಿ ಸಂದರ್ಶನದಲ್ಲಿ ಭಾಗವಹಿಸಬಹುದು.ಹೆಚ್ಚಿನ ಮಾಹಿತಿಗೆ ದೂರವಾಣಿ: 9207155700/ 04994297470 ಸಂಪರ್ಕಿಸಬಹುದು.

