HEALTH TIPS

ಜನಗಮನ ಸೆಳೆದ ಒಲಿಂಪಿಕ್ಸ್ ದಿನಾಚರಣೆ

       
            ಕಾಸರಗೋಡು: ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ನಡೆದ ಒಲಿಂಪಿಕ್ಸ್ ದಿನಾಚರಣೆ ಜನ ಗಮನ ಸೆಳೆದಿದೆ. ಮಾನವ ಸೌಹಾರ್ದತೆಗೆ ಪ್ರಾಧಾನ್ಯ ಒದಗಿಸಿ ಕ್ರೀಡೆಗೆ ಮಹತ್ವ ನೀಡಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿತ್ತು.
       ತ್ರಿಕರಿಪುರದಲ್ಲಿ ಕ್ರೀಡಾಜ್ಯೋತಿ ಪರ್ಯಟನೆ ಆರಂಭಗೊಂಡಿತ್ತು. ಶಾಸಕ ಎಂ.ರಾಜಗೋಪಾಲ್ ಉದ್ಘಾಟಿಸಿದರು.  ಭಾರತೀಯ ಫುಟ್ಬಾಲ್ ತಂಡದ ಮಾಜಿ ಸದಸ್ಯ ಎಂ.ಸುರೇಶ್ ಕ್ರೀಡಾಜ್ಯೋತಿ ಪಡೆದುಕೊಂಡರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿದ್ದರು. ಕ್ರೀಡಾ ಮಂಡಳಿ ರಾಜ್ಯ ಸಮಿತಿ ಸದಸ್ಯ ಟಿ.ವಿ.ಬಾಲನ್, ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಪದಾಧಿಕಾರಿಗಳಾದ ವಿಜಯಮೋಹನ್, ಪಳ್ಳಂನಾರಾಯಣನ್, ಅನಿಲ್ ಬಂಗಳಂ, ಟಿ.ವಿ.ಕೃಷ್ಣನ್,ಸುಲ್ ಫೆಕ್ಸ್ ಸಂಸ್ಥೆಯ ಪ್ರತಿನಿಧಿ ಮಹಮ್ಮದ್ ಕು ಞÂ್ಞ ಮೊದಲಾದವರು ಉಪಸ್ಥಿತರಿದ್ದರು.
       ಕ್ರೀಡಾ ಜ್ಯೋತಿ ಪರ್ಯಟನೆಗೆ ನಡಕ್ಕಾವ್,ಕಾಲಿಕಡವು, ಚೆರುವತ್ತೂರು, ನೀಲೇಶ್ವರ, ಕಾ ಞÂಂಗಾಡ್, ಪಾಲಕುನ್ನು, ಮೇಲ್ಪರಂಬ, ಕಾಸರಗೋಡು ಪ್ರದೇಶಗಳಲ್ಲಿ ಸ್ವಾಗತ ನೀಡಲಾಯಿತು. ಸ್ಥಳೀಯಾಡಳಿತೆ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ನೇತೃತ್ವ ವಹಿಸಿದ್ದರು.
    ಸಮಾರೋಪ ಸಮಾರಂಭ:
     ನಗರದ ನೂತನಬಸ್ ನಿಲ್ದಾಣ ಬಳಿ ಭಾನುವಾರ ಸಮಾರೋಪ ಸಮಾರಂಭ ನಡೆಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಜನತೆಯನ್ನು ಒಂದಾಗಿಸಲು ಕ್ರೀಡೆಯೂ ಒಂದು ಮಾಧ್ಯಮ. ಜಾತಿ-ಮತ ಭೇದಗಳಿಲ್ಲದೆ ಜನ ಒಂದಾಗಿ ಬೆರೆಯಲು ಇದು ಸಹಕಾರಿ. ಕಾಸರಗೋಡಿನಂಥಾ ವಲಯದಲ್ಲಿ ಇದರ ಮಹತ್ವ ಅಧಿಕವಾಗಿದೆ ಎಂದವರು ತಿಳಿಸಿದರು.
    ಹಗ್ಗಜಗ್ಗಾಟದ ರಾಷ್ಟ್ರೀಯ ಮಟ್ಟದ ಪಟು ಸಾಯಿಪ್ರಕಾಶ್ ಪ್ರತಿ ಜ್ಞೆ ನಡೆಸಿಕೊಟ್ಟರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಎಂ.ಸುರೇಶ್ ಬಹುಮಾನ ವಿತರಿಸಿದರು. ಉಪಾಧ್ಯಕ್ಷ ಪಿ.ಪಿ.ಅಶೋಕನ್ ಮಾಸ್ಟರ್, ಅನಿಲ್ ಬಂಗರ, ಪ್ರೊ.ರಘುನಾಥ್, ಕಾರ್ಯದರ್ಶಿ ಕೆ.ವಿ.ರಾಘವನ್ ಮೊದಲಾದವರು ಉಪಸ್ಥಿತರಿದ್ದರು.
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries