ಕಾಸರಗೋಡು: ಸಂಚಾರ ಕಾನೂನು ಉಲ್ಲಂಘನೆ ತಡೆಯುವ ಹಿನ್ನೆಲೆಯಲ್ಲಿ ಜುಲೈ ಒಂದರಿಂದ 6 ವರೆಗೆ ಮತ್ತು ಜುಲೈ 15ರಿಂದ 20ವರೆಗೆ ಉಪ್ಪಳ ಗೇಟಿನ ಬಳಿ ಮತ್ತು ಪಡನ್ನಕ್ಕಾಡ್ ಸೇತುವೆ ಬಳಿ ಪ್ರತಿದಿನ 24 ತಾಸುಗಳ ವಿವಿಧ ಇಲಾಖೆಗಳ ಜಂಟಿ ವಾಹನ ತಪಾಸಣೆ ನಡೆಯಲಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ರಸ್ತೆ ಸುರಕ್ಷೆ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಪೆÇಲೀಸ್, ಮೋಟಾರು ವಾಹನ, ಕಂದಾಯ ಮತ್ತು ಅಬಕಾರಿ ಇಲಾಖೆಗಳು ಜೊತೆಯಾಗಿ ಈ ತಪಾಸಣೆ ನಡೆಸಲಿವೆ. ಅವೈಜ್ಞಾನಿಕ ರೀತಿಯ ನಂಬ್ರ ಪ್ಲೇಟ್, ಆಲ್ಟ್ರೇಷನ್, ದೀಪಗಳ ಅಳವಡಿಕೆ ಇತ್ಯಾದಿ, ಅತಿ ವೇಗ, ಅತಿ ಭಾರ ಹೇರಿಕೆ, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧಾರಣೆ ಮಾಡದೇ ಇರುವುದು, ಮೂವರು ಸಂಚಾರ ಇತ್ಯಾದಿಗಳನ್ನು ಪತ್ತೆಮಾಡಲಾಗುವುದು. ಆರೋಪಿಗಳಿಗೆ ದಂಡ ಹೇರುವುದರ ಜೊತೆಗೆ ಜಾಗೃತಿ ಮೂಡಿಸುವ ಕಾಯಕವೂ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಮಂಗಳೂರು ಕಡೆಯಿಂದ ಬರುವ ಕರ್ನಾಟಕ ಸರಕಾರಿ ಬಸ್‍ಗಳು ರಾತ್ರಿ7 ರಿಂದ ಬೆಳಗ್ಗೆ 9 ಗಂಟೆ ವರೆಗೆ ಕರಂದೆಕ್ಕಾಡಿನಿಂದ ನೇರವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೆÇೀಗೆ ತೆರಳುತ್ತವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಹಳೆ ಬಸ್ ನಿಲ್ದಾಣ ಮೂಲಕವೇ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೆÇೀಗೆ ತೆರಳುವಂತೆ ಸಭೆ ಆದೇಶಿಸಿದೆ.
ಕಾಂಞಂಗಾಡ್ ನಗರಸಭೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಆಟೋರಿಕ್ಷಾಗಳಿಗೆ ಸಿಟಿ ಲಿಮಿಟೆಡ್ ಪರ್ಮಿಟ್ ಮಂಜೂರುಮಾಡಲು ಕಾಸರಗೋಡು ನಗರಸಭೆಗೆ ಆದೇಶ ನೀಡಲಾಗಿದೆ. ಜಿಲ್ಲೆಯ ಪ್ರಧಾನ ರಸ್ತೆಗಳಲ್ಲಿ ಪೇಯ್ಡ್ ಪಾರ್ಕಿಂಗ್ ಸೌಲಭ್ಯ ಏರ್ಪಡಿಸಬೇಕು, ಎರ್ನಾಕುಳಂ, ತಿರುವನಂತಪುರ ಮಾದರಿಯಲ್ಲಿ ಈ ವ್ಯವಸ್ಥೆ ನಡೆಯಬೇಕು ಎಂದು ಜಿಲ್ಲೆಯ ನಗರಸಭೆಗಳಿಗೆ ಸಭೆ ಆದೇಶ ನೀಡಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಕಾಸರಗೋಡು ಜೋಯಿಂಟ್ ಆರ್.ಟಿ.ಒ. ಎ.ಸಿ.ಷೀಬಾ, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಟಿ.ಟಿ.ಅರುಣ್, ಪಿ.ಡಬ್ಲ್ಯೂ.ಡಿ.ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಪಿ.ವಿನೋದ್ ಕುಮಾರ್, ಮೋಟಾರು ವೆಹಿಕಲ್ ಇನ್ಸ್ ಪೆಕ್ಟರ್ ಟಿ.ವೈಕುಂಠನ್, ಎನ್.ಎಚ್. ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸಿ.ಜೆ.ಕೃಷ್ಣನ್, ಕೆ.ಎಸ್.ಟಿ.ಪಿ. ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಪಿ.ಪಿ.ವೇಣು ನಾಯರ್, ನಗರಸಭೆ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.


