ಕಾಸರಗೋಡು: ಉನ್ನತ ಶಿಕ್ಷಣ ಮತ್ತು ನೌಕರಿ ಲಭ್ಯತೆ ಸಂಬಂಧ ಸ್ಪರ್ಧಾ ಪರೀಕ್ಷೆಗಳಲ್ಲಿ ಭಾಗಿಯಾಗುವವರ ಮನೋಬಲ ಹೆಚ್ಚಿಸುವುದರೊಂದಿಗೆ ವ್ಯಕ್ತಿತ್ವ ವಿಕಸನ, ಸಂವಹನ, ಸಾಮಾಜಿಕ ಜ್ಞಾನ, ಕೆರಿಯರ್ ಅಭಿವೃದ್ಧಿ, ಕಂಪ್ಯೂಟರ್ ಜ್ಞಾನ ಇತ್ಯಾದಿ ವಲಯಗಳಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು.
ಮೂರು ತಿಂಗಳ ಅವ„ಯ ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತರಾದವರಿಗೆ ತಿಂಗಳಿಗೆ ಒಂದು ಸಾವಿರ ರೂ. ವಿದ್ಯಾರ್ಥಿವೇತನ ಲಭಿಸಲಿದೆ. ಯಾವುದೇ ವಿಷಯದಲ್ಲಿ ಪದವಿ/ಮೂರು ವರ್ಷದ ಡಿಪೆÇ್ಲೀಮಾ/ಎಂಜಿನಿಯರಿಂಗ್ ತೇರ್ಗಡೆ ಹೊಂದಿದ 18ರಿಂದ 26 ವರ್ಷ ಪ್ರಾಯದ ನಡುವಿನವರು ಭಾಗವಹಿಸಬಹುದು. ಜೂ.29ರ ಮುಂಚಿತವಾಗಿ ವಯಸ್ಸು, ಜಾತಿ, ಶಿಕ್ಷಣ ಅರ್ಹತಾ ಪತ್ರಗಳ ನಕಲು ಸಹಿತ ಸೈಬರ್ ಶ್ರೀ, ಸಿ.ಡಿಟ್, ಅಂಬೇಡ್ಕರ್ ಭವನ್, ಪಿ.ಒ. ತಿರುವನಂತಪುರ -695015 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ದೂರವಾಣಿ: 9947692219, 8921412961.


