ಕಾಸರಗೋಡು: ಜಿಲ್ಲೆಯಲ್ಲಿ 2017 ಎ.4ರಿಂದ 9 ವರೆಗೆ ಎಂಡೋಸಲಾನ್ ಸಂತ್ರಸ್ತರಿಗಾಗಿ ನಡೆಸಲಾದ ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ ಸ್ಲಿಪ್ ಲಭಿಸಿಯೂ ತಪಾಸಣೆಗೆ ಒಳಗಾಗಲು ಸಾಧ್ಯವಾಗದೇ ಇರುವ ಎಲ್ಲರಿಗೆ 2019 ಜು.10ರಂದು ಪುಲ್ಲೂರು-ಪೆರಿಯ ಗ್ರಾಮ ಪಂಚಯತ್ ಆವರಣದಲ್ಲಿ ವಿಶೇಷ ವೈದ್ಯಕೀಯ ಶಿಬಿರ ನಡೆಸಲಾಗುವುದು.
2017 ಎ.8ರಂದು ಹರತಾಳ ನಡೆದ ಹಿನ್ನೆಲೆಯಲ್ಲಿ ಬೋವಿಕ್ಕಾನದಲ್ಲಿ ನಡೆಸಿದ್ದ ವೈದ್ಯಕೀಯ ಶಿಬಿರದಲ್ಲಿ ಸ್ಲಿಪ್ ಲಭಿಸಿದ ಅನೇಕ ಮಂದಿಗೆ ತಪಾಸಣೆಗೆ ಒಳಗಾಗಲು ಸಾಧ್ಯವಾಗಿರಲಿಲ್ಲ. ಅಂಥವರು ಈ ಬಾರಿಯ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
2019 ಫೆ.3ರಂದು ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ, ಕಂದಾಯ ಸಚಿವರ ಸಮಕ್ಷದಲ್ಲಿ ಎಂಡೋಸಲಾನ್ ಸಂತ್ರಸ್ತರ ಪ್ರತಿನಿ„ಗಳೊಂದಿಗೆ ನಡೆಸಿದ್ದ ಮಾತುಕತೆಯಲ್ಲಿ ಕೈಗೊಳ್ಳಲಾದ ನಿರ್ಧಾರದ ಹಿನ್ನೆಲೆಯಲ್ಲಿ ಈ ಶಿಬಿರ ನಡೆಸಲಾಗುತ್ತಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಆದೇಶ ಪ್ರಕಾರ 2017 ಎಪ್ರಿಲ್ ತಿಂಗಳಲ್ಲಿ ನಡೆಸಲಾದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಸ್ಲಿಪ್ ಲಭಿಸಿ ತಪಾಸಣೆಗೆ ಒಳಪಡಲಾಗದ ಮಂದಿಗೆ 2019 ಜು.10ರಂದು ವಿಶೇಷ ಶಿಬಿರ ನಡೆಸಲಾಗುವುದು. ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಅವರ ನೇತೃತ್ವದಲ್ಲಿ ಪರಿಣತ ವೈದ್ಯರ ತಂಡ ಈ ವಿಶೇಷ ಶಿಬಿರ ನಡೆಸಲಿದೆ.

