ಪೆರ್ಲ: ಬೆದ್ರಂಪಳ್ಳ ಶ್ರೀಗಣೇಶ ಭಜನಾ ಮಂದಿರದ ಆಡಳಿತ ಸಮಿತಿಯ ನೇತೃತ್ವದಲ್ಲಿ ನಡೆಸಲ್ಪಡುವ ಮಕ್ಕಳ ಭಜನಾ ಸಂಗೀತ ತರಬೇತಿಯ ಉದ್ಘಾಟನೆ ಮಂದಿರದಲ್ಲಿ ಭಾನುವಾರ ಜರಗಿತು.
ಮಂದಿರದ ಅಧ್ಯಕ್ಷ ನಾರಾಯಣ ಆಳ್ವ ವೈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯದರ್ಶಿ ಶ್ರೀಧರ ನಾಯಕ್ ಕುಕ್ಕಿಲ,ಸಮಿತಿಯ ಪದಾಧಿಕಾರಿಗಳಾದ ಕೃಷ್ಣಪ್ಪ ಎನ್,ಚೆನ್ನಯ ಪೂಜಾರಿ.ಕೆ, ನಾರಾಯಣ ಪೂಜಾರಿ ಎನ್.ಪಿ, ನಾರಾಯಣ ಪಾಟಾಳಿ ಎನ್, ಸುಭಾಷ್.ಬಿ, ರಮೇಶ್.ಎನ್, ಮಹಿಳಾ ಸಮಿತಿಯ ಅಧ್ಯಕ್ಷೆ ಕುಸುಮ ಎನ್, ಅನಿತಾ ಎನ್, ಮೋಹಿನಿ, ಪೂರ್ಣಿಮ ಮೊದಲಾದವರು ಉಪಸ್ಥಿತರಿದ್ದರು. ಯುವ ಸಂಗೀತ ತರಬೇತುದಾರರಾದ ಪ್ರಕಾಶ್ ಆಚಾರ್ಯ ಕುಂಟಾರು ಮಕ್ಕಳಿಗೆ ಭಜನಾ ಸಂಗೀತ ತರಬೇತುದಾರರಾಗಿ ಭಾಗವಹಿಸಿದರು. ಪ್ರತಿ ಭಾನುವಾರ ಮಧ್ಯಾಹ್ನ ಬಳಿಕ ತರಬೇತಿ ನಡೆಯಲಿದ್ದು ಸೇರಲಿಚ್ಛಿಸುವ ಮಕ್ಕಳು ಮಂದಿರದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


