ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‍ನ ಆಶ್ರಯದಲ್ಲಿ ಕೃಷಿ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್, ರೂಪೆ ಕೆಸಿಸಿ ಕಾರ್ಡ್ ವಿತರಣೆ ಮತ್ತು ಹಸಿರು ಸಹಕಾರಿ ಉದ್ಘಾಟನೆ ಕಾರ್ಯಕ್ರಮ ಇಂದು(ಜೂ.25) ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ.
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ವಿ.ರಾಜನ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಸೀಸ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೃಷಿ ಸಾಲ ಕಿಸಾನ್ ಕ್ರೆಡಿಟ್ ಕಾರ್ಡ್, ರೂಪೆ ಕೆಸಿಸಿ ಕಾರ್ಡ್ ವಿತರಣೆಯನ್ನು ಸಹಕಾರಿ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಕೆ.ರಾಜಗೋಪಾಲ್ ನೆರವೇರಿಸುವರು. ರೂಪೆ-ಕೆಸಿಸಿ ಯೋಜನೆಯ ಮಾಹಿತಿಯನ್ನು ಜಿಲ್ಲಾ ಬ್ಯಾಂಕ್ ಕೃಷಿ ಅಧಿಕಾರಿ ಪ್ರವೀಣ್ ಕುಮಾರ್ ನೀಡುವರು.
ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ ಸುಪ್ರಿಯ ಶೆಣೈ, ಸಹಕಾರಿ ಸಂಘ ಹಿರಿಯ ಲೆಕ್ಕ ಪರಿಶೋಧಕ ಜಾನ್ಸನ್ ಸಿ.ಜೆ, ಸಹಕಾರಿ ಸಂಘ ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್ ಶುಭಹಾರೈಸುವರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಯೋಗೀಶ್ ಕುಂಜತ್ತೂರು ಉಪಸ್ಥಿತರಿರುವರು.

