ಕಾಸರಗೋಡು: ರಂಗಭೂಮಿ ಸಂಸ್ಥೆಯಾದ ಗಡಿನಾಡು ಕಲಾವಿದರು ಕಾಸರಗೋಡು ಇದರ ಮಹಾಸಭೆ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅವರು ಅಧ್ಯಕ್ಷತೆ ವಹಿಸಿ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ದಿವಾಕರ ಅಶೋಕನಗರ ಅವರು ಕಳೆದ ವರ್ಷ ಆಯೋಜಿಸಿದ ಕಾರ್ಯಕ್ರಮಗಳ ಸಂಪೂರ್ಣ ವರದಿಯನ್ನು ಮಂಡಿಸಿದರು. ಕೋಶಾ„ಕಾರಿ ಶ್ರೀಕಾಂತ್ ಕಾಸರಗೋಡು ಆಯವ್ಯಯ ಮಂಡಿಸಿದರು.
ಸಭೆಯಲ್ಲಿ ವಾಮನ ಮುಳ್ಳಂಗೋಡು, ರಾಜೇಶ್ ಆಳ್ವ, ರವೀಂದ್ರ ರೈ ಮಲ್ಲಾವರು, ಸುಂದರ ಮವ್ವಾರು, ಎಂ.ಡಿ.ವಿಜಯ, ಜನಾರ್ಧನ, ಗಣೇಶ್ ಕೆ.ಬಿ, ರಾಜೇಂದ್ರ, ಜಯಶ್ರೀ, ಪ್ರದೀಪ್ ಬೇಕಲ್ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಹಿಂದಿನ ವರ್ಷದ ಪದಾ„ಕಾರಿಗಳನ್ನು ಪ್ರಸ್ತುತ ವರ್ಷದ ಪದಾ„ಕಾರಿಗಳಾಗಿ ಮುಂದುವರಿಸಲಾಯಿತು.
ಕಾರ್ಯದರ್ಶಿ ದಿವಾಕರ ಅಶೋಕನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ದಿವಾಕರ್ ವಂದಿಸಿದರು.

